ಮುಲ್ಕಿ: ರಾಷ್ಟ್ರೀಯ ಬಿಲ್ಲವ ಮಹಾಮಂಡಲ (ರಿ)ಮುಲ್ಕಿ ವತಿಯಿಂದ ಜಯಸಿ ಸುವರ್ಣ ರ ಪ್ರಥಮ ವರ್ಷದ, ಸಂಸ್ಮರಣೆ, ಸ್ಮಾರಕ ಬಿಂಬ ಅನಾವರಣ ಹಾಗೂ ಜಯ ಸಿ ಸುವರ್ಣ ಸಭಾಂಗಣ ನಾಮಕರಣ ಸಮಾರಂಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಲ್ಲಿ ನಡೆಯಿತು.
ಕೇಂದ್ರ ಸರಕಾರದ ಮಾಜೀ ಸಚಿವರಾದ ಜನಾರ್ದನ ಪೂಜಾರಿ ಯವರು ದಿ. ಜಯ ಸುವರ್ಣ ರವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ ಜಯ ಸುವರ್ಣರು ವ್ಯಕ್ತಿಯಲ್ಲ ಶಕ್ತಿ ಯಾಗಿದ್ದರು. ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಪಾಲಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ವಹಿಸಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ನಾರಾಯಣ ಗುರು ಅಧ್ಯಯನಪೀಠ ದ ಡಾ. ಗಣೇಶ್ ಅಮೀನ್ ಸಂಕಮಾರ್ ಸಂಸ್ಕರಣಾ ಭಾಷಣದಲ್ಲಿ ಸಂಘಟನೆ ಬಲಿಷ್ಟ ಪಡಿಸುವುದರ ಮೂಲಕ ಮೂಲಕ ದಿ.ಜಯ ಸುವರ್ಣರವರ ಪ್ರತಿಬಿಂಬವಾಗಿ ಸಮಾಜಕ್ಕೆ ಮಾದರಿಯಾಗಲಿ ಎಂದರು.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಬಿಲ್ಲವರು ಜಾತಿವಾದಿಗಳಾಗಬಾರದು ರಾಷ್ಟ್ರವಾದಿಗಳಾಗಬೇಕು, ಪಕ್ಷ ಬಿಟ್ಟು ಹೋಗಿರಬಹುದು ಆದರೆ ತಂದೆಯ ಸ್ಥಾನ ಜನಾರ್ಧನ ಪೂಜಾರಿಯವರಿಗೆ ಎಂದು ಮಾರ್ಮಿಕವಾಗಿ ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ, ವಿನಯಕುಮಾರ್ ಸೊರಕೆ, ಮುಂಬೈ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ಉದ್ಯಮಿ ರವಿ ಶೆಟ್ಟಿ, ಮಾಜೀ ಶಾಸಕ ಗೋಪಾಲ ಪೂಜಾರಿ, ವಸಂತ ಬಂಗೇರ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮುಂಬೈ ಬಿಲ್ಲವರ ಅಸೋಶಿಯೇಶನ್ ಅಧ್ಯಕ್ಷ ಹರೀಶ್ ಜಿ.ಅಮೀನ್, ಮುಂಬೈ ಬಿಲ್ಲವರ ಚೇಂಬರ್ ಆಫ್ ಕಾಮರ್ಸ್ ನ ಎನ್. ಟಿ.ಪೂಜಾರಿ, ದಿ. ಜಯ ಸುವರ್ಣ ರ ಪತ್ನಿ ಲೀಲಾವತಿ ಜಯ ಸುವರ್ಣ, ಪುತ್ರ ಸೂರ್ಯಕಾಂತ ಸುವರ್ಣ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲೇಖಕ ಶ್ರೀಧರ ಮಣಿಪಾಲ್ ಬರೆದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕ ಹಾಗೂ ಭಾರತ್ ಕೋಪರೇಟಿವ್ ಬ್ಯಾಂಕ್ ನ ನಿತ್ಯಾನಂದ ಕೋಟ್ಯಾನ್ ಬರೆದ ಜಯಸುವರ್ಣ ಚರಿತ್ರೆಯ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು ಸ್ವಾಗತಿಸಿದರು, ಗಂಗಾಧರ ಪೂಜಾರಿ ಬಾಳ ಧನ್ಯವಾದ ಅರ್ಪಿಸಿದರು, ಪಲ್ಲವಿ ರಾಜೇಶ್, ರಂಗಕರ್ಮಿ ಚಂದ್ರಶೇಖರ ಸುವರ್ಣ ನಿರೂಪಿಸಿದರು.
Kshetra Samachara
31/10/2021 03:18 pm