ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಪದವು ಎಂಬಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆ ಕುಸಿದು ತೀವ್ರ ಕಂಗಾಲಾಗಿರುವ ರಾಜು ಮುಖಾರಿಯವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಭೇಟಿ ನೀಡಿ ಸಾಂತ್ವನ ಹೇಳಿ ತಾತ್ಕಾಲಿಕ ನೆಲೆಯಲ್ಲಿ ಪರಿಹಾರ ಧನ ವಿತರಿಸಿದರು.
ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ಐಕಳ ಗ್ರಾಪಂ ಮಾಜಿ ಅಧ್ಯಕ್ಷೆ ಪದ್ಮಿನಿ, ಮಾಜೀ ಸದಸ್ಯ ಸುಧಾಕರ್ ಸಾಲ್ಯಾನ್, ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಸುರಿದ ಭಾರೀ ಮಳೆಗೆ ಏಕಾಏಕಿ ಮನೆಯ ಒಂದೊಂದು ಭಾಗ ಕುಸಿತ ವಾಗುತ್ತಿರುವುದನ್ನು ಕಂಡು ಭಯಭೀತರಾಗಿ ಮನೆಯೊಳಗೆ ಮಲಗಿದ್ದ ರಾಜು ಮುಖಾರಿ, ಮೀನಾ ಹಾಗೂ ರವಿ ಹೊರಗೆ ಓಡಿ ಜೀವಪಾಯದಿಂದ ಪಾರಾಗಿದ್ದರು.
ಸ್ಥಳಕ್ಕೆ ಐಕಳ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಭೇಟಿ ನೀಡಿದ್ದು ತಾತ್ಕಾಲಿಕ ನೆಲೆಯಲ್ಲಿ ಬೇರೆ ಮನೆ ವಾಸ್ತವ್ಯಕ್ಕೆ ಕಲ್ಪಿಸಿದ್ದು ಪಂಚಾಯಿತಿಯಿಂದ ನೂತನ ಮನೆಗೆ ಸದ್ಯವೇ ಅನುದಾನ ಮಂಜೂರಾಗಲಿದೆ ಎಂದು ತಿಳಿಸಿದ್ದಾರೆ.
Kshetra Samachara
26/08/2022 01:21 pm