ಮೂಡಬಿದ್ರೆ:ಬಿಜೆಪಿ ಮೂಡುಬಿದಿರೆ ಮಂಡಲ ಹಿರಿಯ ನಾಗರಿಕರ ಪ್ರಕೋಷ್ಠ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಗೌರವ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ಹಿರಿಯ ನಾಗರಿಕರು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು ಅವರ ಸೇವೆಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಪಕ್ಷದ ಬುನಾದಿಗೆ ಸಾಧಕರಾದ ಹಿರಿಯ ಮಹನೀಯರನ್ನು 13 ಮಂದಿ, ಮೂಡುಬಿದಿರೆ ಕೀರ್ತಿಗೆ ಮತ್ತಷ್ಟು ಮೆರಗು ತಂದ 6 ಮಂದಿ, ವಿಶೇಷ ಒಲಂಪಿಕ್ ಭಾರತ್ ಪುಟ್ಬಾಲ್ ಹಾಗೂ ಪವರ್ ಲಿಪ್ಟಿಂಗ್ ಕ್ರೀಡಾಕೂಟದಲ್ಲಿ ರಾಜ್ಯದಿಂದ ಆಯ್ಕೆಯಾಗಿ ರಾಷ್ಠೀಯ ತಂಡದಲ್ಲಿ ಭಾಗವಹಿಸಿದ ವಿಶೇಷ ಚೇತನ 3 ವಿದ್ಯಾರ್ಥಿಗಳು, ಪದವಿಪೂರ್ವ ಶಿಕ್ಷಣದಲ್ಲಿ ಅತೀಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳು, ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ 9 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಹಿರಿಯ ನಾಗರೀಕರ ಪ್ರಕೋಷ್ಠದ ರಾಜ್ಯ ಸಂಚಾಲಕರು ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಡಲಾಧ್ಯಕ್ಷ ಸುನಿಲ್ ಆಳ್ವ,ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಆರ್.ಪಂಡಿತ್, ಜಿಲ್ಲಾ ಹಿರಿಯ ನಾಗರಿಕರ ಪ್ರಕೋಷ್ಠದ ಸಹಸಂಚಾಲಕ ಸದಾಶಿವ ಅಂಚನ್, ಈಶ್ವರ್ ಕಟೀಲ್, ಕಸ್ತೂರಿ ಪಂಜ, ಸುಕೇಶ್ ಶೆಟ್ಟಿ, ಕೆ.ಎಂ.ಎಪ್ ಆಧ್ಯಕ್ಷ ಸುಚರಿತ ಶೆಟ್ಟಿ, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಕೇಶವ ಕರ್ಕೇರ, ಗೋಪಾಲ್ ಶೆಟ್ಟಿಗಾರ್, ಪುರಸಭೆ ಹಾಗೂ ಗ್ರಾಮಪಂಚಾಯತ್ ಸದಸ್ಯರು, ಮಂಡಲದ ವಿವಿಧ ಮೋರ್ಚಾ ಹಾಗೂ ಪ್ರಕೋಷ್ಡಗಳ ಪದಾಧಿಕಾರಿಗಳು, ಹಿರಿಯನಾಗರಿಕರ ಪ್ರಕೋಷ್ಠದ ಸಂಚಾಲಕ ಸುರೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
21/08/2022 08:26 pm