ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾರ್ಯ: ಡಾ. ಭರತ್ ಶೆಟ್ಟಿ

ಸುರತ್ಕಲ್:ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎಂಟು ವರ್ಷಗಳು ತುಂಬಿದ್ದು ಇದರ ಪ್ರಯುಕ್ತ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆ ,ರಾಜ್ಯದಾದ್ಯಂತ ಹದಿನೈದು ದಿನಗಳ ಕಾಲ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಶಾಸಕ ಡಾಕ್ಟರ್ ಭರತ್ ಶೆಟ್ಟಿ ಹೇಳಿದರು.

ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕರು ಕ್ಷೇತ್ರದಲ್ಲಿ ರಕ್ತದಾನ ಶಿಬಿರ ಆರೋಗ್ಯ ಶಿಬಿರ ಸರಕಾರಿ ಸೌಲಭ್ಯಗಳಾದ ಆಧಾರ್ ಕಾರ್ಡ್ ಸೇವೆ ಪಿಂಚಣಿ  ನೀಡುವ ಕಾರ್ಯ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮಾಜದ ಬಡವರ ಮತ್ತು ಉಪೇಕ್ಷಿತರ  ಸೇವೆ, ಆರೋಗ್ಯ ಮತ್ತು ಸಾಂಕ್ರಾಮಿಕ ವಿಪತ್ತು ನಿರ್ವಹಣೆ, ವಾಕ್ಸಿನೇಷನ್ ದಾಖಲೆಯ ಸೇವೆ, ರೈತರ ಕಲ್ಯಾಣ ಕಾರ್ಯಕ್ರಮಗಳು ಯುವ ಸಬಲೀಕರಣ ಆರ್ಥಿಕ ಸುಧಾರಣೆಗಳು ತಂತ್ರಜ್ಞಾನ ಆಧಾರಿತ ಭಾರತ, ಶಿಕ್ಷಣ ನೀತಿ ಐತಿಹಾಸಿಕ ಹೆಗ್ಗುರುತಿನ ನಿರ್ಧಾರ ಗಳಾದ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ಕಾಶಿ ವಿಶ್ವನಾಥ ಕ್ಷೇತ್ರ ಮತ್ತು ಕೇದಾರನಾಥ ಕ್ಷೇತ್ರದ ಜೀರ್ಣೋದ್ಧಾರ,ತ್ರಿವಳಿ ತಲಾಕ್ ಅಂತ್ಯ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಗೌರವಾರ್ಥ 5 ಸ್ಥಳಗಳನ್ನು ಪಂಚತೀರ್ಥ ಗಳಾಗಿ ಅಭಿವೃದ್ಧಿ, ನವಂಬರ್ 26 ರನ್ನ ಸಂವಿಧಾನ ದಿನವನ್ನಾಗಿ ಆಚರಣೆ ಮತ್ತಿತರ ಹಲವು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ ಎಂದರು.

ಟೋಲ್ಗೇಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಈ ಹಿಂದೆ ಟೋಲ್ಗೇಟ್ ನಿರ್ಮಾಣವಾದಾಗ ಹೋರಾಟವನ್ನು ಮಾಡದ ಹೋರಾಟಗಾರರು ಆಮಿಷಕ್ಕೆ ಒಳಗಾಗಿ  ದುಡ್ಡು ಪಡೆದುಕೊಂಡು ಮೌನವಾಗಿದ್ದರು, ಇದೀಗ ಮತ್ತೆ ನಾಟಕಕ್ಕೆ ಇಳಿದಿದ್ದಾರೆ. ಇಂತಹ ವಿಚಾರಗಳಿಗೆ ನಾನು ಹೆಚ್ಚಾಗಿ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲಬಯಸುವುದಿಲ್ಲ

ಕೋರ್ಟಿಗೆ ಹೋದವರು  ವಿವಿಧ ಕಾರಣಗಳಿಗಾಗಿ ಕೇಸನ್ನು ವಾಪಸ್ಸು ಪಡೆದುಕೊಂಡು ಮೌನವಾಗಿದ್ದರು. ಈ ಎಲ್ಲ ಬೆಳವಣಿಗೆಗಳು ಆದಾಗ ಯಾರು ಕೂಡ ಮಾತನಾಡಿರಲಿಲ್ಲ ಎಂದು ಕಿಡಿಕಾರಿದರು.

ಟೋಲ್ ಗೇಟ್ ರದ್ದಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ,ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆಯಿದೆ. ಮಾತ್ರವಲ್ಲ ಈ ಕುರಿತಾಗಿ ಕೇಂದ್ರ ಸಚಿವ ಗಡ್ಕರಿ ರವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಪತ್ರ ಬರೆದಿದ್ದೇನೆ. ಟೋಲ್ ಗೇಟ್ ರದ್ದತಿ ಕುರಿತಾಗಿ ಕಾನೂನಿನ ಅಡಚಣೆ ಇಲ್ಲದಂತೆ ರದ್ದು ಮಾಡುವ ಬಗ್ಗೆ ಈಗಾಗಲೇ ಕೇಂದ್ರ ಹೆದ್ದಾರಿ ಸಚಿವರು ಕ್ರಮವನ್ನು ಕೈಗೊಂಡಿದ್ದಾರೆ. ಯಾವ ರೀತಿ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ತಿಲಕ್ ರಾಜ ಕೃಷ್ಣಾಪುರ ಸಂದೀಪ್ ಪಚನಡಿ ಮಹೇಶ್ ಮೂರ್ತಿ ಸುರತ್ಕಲ್ ಭರತ್ ರಾಜ ಕೃಷ್ಣಾಪುರ, ಶ್ವೇತ ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ನಯನ ಕೋಟ್ಯಾನ್ ಬಿಜೆಪಿ ಮುಖಂಡರಾದ ರಾಜೇಶ್ ಮುಕ್ಕ , ರಾಘವೇಂದ್ರಶೆಣೈ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/06/2022 07:27 pm

Cinque Terre

690

Cinque Terre

0

ಸಂಬಂಧಿತ ಸುದ್ದಿ