ಮೂಡಬಿದ್ರೆ:ಮೂಡಬಿದ್ರೆ ಆಡಳಿತ ಸೌಧದ ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಗ್ರಂಥಾಲಯ ಶೋಚನೀಯ ಸ್ಥಿತಿಯಲ್ಲಿಯೇ ಇದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆರೋಪಿಸಿದ್ದಾರೆ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಜ್ಞಾನ ಸಂಪಾದನೆಗೆ ಸ್ಥಾಪನೆಗೊಂಡ ಗ್ರಂಥಾಲಯ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರ ಕಚೇರಿಯ ಪಕ್ಕದಲ್ಲಿದ್ದರೂ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.
ಸಾರ್ವಜನಿಕ ಗ್ರಂಥಾಲಯದ ಮೇಲ್ಛಾವಣಿ ಸಂಪೂರ್ಣವಾಗಿ ಸೋರುತ್ತಿದ್ದು ಮಳೆಗಾಲದ ನೀರಿನಿಂದ ಗ್ರಂಥಾಲಯದ ಒಳಗಿನ ಪುಸ್ತಕಗಳನ್ನು ರಕ್ಷಿಸುವ ಸಲುವಾಗಿ ಅಲ್ಲಿನ ಸಿಬ್ಬಂದಿಗಳು ಕಟ್ಟಡದ ಮೇಲ್ಛಾವಣಿಗೆ ತಾತ್ಕಾಲಿಕವಾಗಿ ಟರ್ಪಲ್ ಹೊದಿಸಿದ್ದಾರೆ.
ಶಾಸಕರು ದಿನಕ್ಕೆ ಒಂದು ಬಾರಿಯಾದರೂ ಈ ಗ್ರಂಥಾಲಯದ ಪಕ್ಕದಲ್ಲಿಯೇ ಸಂಚರಿಸುತ್ತಾರೆ. ಆದರೂ ಗ್ರಂಥಾಲಯ ಸೋರುತ್ತಿದ್ದರು ತನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದ್ದಾರೆ.
ಒಂದು ಕಡೆ ಆಡಳಿತ ಸೌಧ ಉದ್ಘಾಟನೆಯಾಗಿ ತಿಂಗಳು ಕಳೆದರೂ ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸಲು ಮೂಲ ಸೌಕರ್ಯವನ್ನು ಒದಗಿಸದೆ ಕೇವಲ ಪ್ರಚಾರಕ್ಕೆ ಸೀಮಿತ ಆಗಿರುವುದು ಕಾಣಬಹುದು.
ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜ್ಞಾನ ಸಂಪಾದನೆ ಹಾಗೂ ಮಾಹಿತಿ ಸಂಗ್ರಹಣೆಗೆ ದಾರಿ ದೀಪ ದಂತಿರುವ ಸಾರ್ವಜನಿಕ ಗ್ರಂಥಾಲಯದ ಮೇಲೆ ಎಳ್ಳಷ್ಟು ಕಾಳಜಿ ಇಲ್ಲದೆ ಇರುವುದು ಶಾಸಕರ ಕರ್ತವ್ಯ ನಿಷ್ಠೆಯನ್ನು ಎತ್ತಿತೋರಿಸುತ್ತದೆ ಎಂದು ಮಿಥುನ್ ರೈ ಸಾಮಾಜಿಕ ಜಾಲತಾಣದಲ್ಲಿ ಅಣಕವಾಡಿದ್ದಾರೆ.
Kshetra Samachara
09/06/2022 09:39 pm