ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸ್ವಾಮಿ ವಿವೇಕಾನಂದರ ಉದ್ದೇಶಕ್ಕೆ ಚ್ಯುತಿ ಬಾರದಂತೆ ಯತಿ ಪರಂಪರೆ ರಾಮಕೃಷ್ಣ ಮಠವನ್ನು ಮುನ್ನಡೆಸುತ್ತಿದೆ!

ಮಂಗಳೂರು: ಸ್ವಾಮಿ ವಿವೇಕಾನಂದರು ಯಾವ ಉದ್ದೇಶ, ಕನಸು ಇಟ್ಟುಕೊಂಡು ರಾಮಕೃಷ್ಣ ಮಠವನ್ನು ಸ್ಥಾಪಿಸಿದರೋ, ಅದಕ್ಕೆ ಎಳ್ಳಷ್ಟೂ ಚ್ಯುತಿ ಬಾರದಂತೆ ಯತಿ ಪರಂಪರೆ ರಾಮಕೃಷ್ಣ ಮಠವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಕಳೆದ 175 ವರ್ಷಗಳಲ್ಲಿ ರಾಮಕೃಷ್ಣ ಮಠವಹ ಅದ್ಭುತವಾದ ಪರಿವರ್ತನೆಯ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಮಂಗಳೂರಿನ ರಾಮಕೃಷ್ಣ ಮಠವೂ ಕಳೆದ 75 ವರ್ಷಗಳಲ್ಲಿ ಅನೇಕ ಅತ್ಯುತ್ತಮ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಅಲ್ಲದೆ ರಾಜ್ಯಕ್ಕೆ ಮಾದರಿಯಾಗಿರುವ ಸ್ವಚ್ಛತಾ ಆಂದೋಲನ ಮಾಡಿದೆ ಎಂದು ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾಡಿನ ಇತರ ಮಠಗಳೂ ರಾಮಕೃಷ್ಣ ಮಠದ ರೀತಿಯಲ್ಲಿ ನಡೆದುಕೊಂಡಲ್ಲಿ ಸಮಾಜದಲ್ಲಿ ಉತ್ತಮ ಪರಿವರ್ತನೆ ಸಾಧ್ಯ. ಮೋದಿಯವರು ಪ್ರಧಾನಿಯಾದ ಬಳಿಕ ನಾವು ಸನಾತನ ಧರ್ಮಕ್ಕೆ ಸೇರಿರುವ ಹಿಂದೂಗಳು ಎಂದು ಹೇಳುವ ಹೆಮ್ಮೆಯ ವಾತಾವರಣ ಸೃಷ್ಟಿಯಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಶ್ಚಿಮ ಬಂಗಾಳ ಬೇಲೂರಿನ ರಾಮಕೃಷ್ಣ ಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅವರು ಮಾತನಾಡಿ, ಸರ್ವಧರ್ಮಗಳ ಸಮಭಾವದಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ಸ್ವಾಮಿ ವಿವೇಕಾನಂದರು ವೇದ ವಿದ್ಯಾಲಯವನ್ನು ಪ್ರಾರಂಭ ಮಾಡಿ ಸರ್ವ ಸಮುದಾಯಕ್ಕೆ ವೇದಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ವೇದಾಧ್ಯಯನದಿಂದ ಮೂಢನಂಬಿಕೆ ದೂರ ಮಾಡಬಹುದು ಎಂದು ನಂಬಿರುವ ಅವರು ಈ ಮೂಲಕ ಋಷಿ ಸಂಸ್ಕೃತಿಗೂ ಪ್ರಚಾರ ನೀಡಿದರು. ಕರ್ಮ, ಧರ್ಮದ ಮೂಲಕ ದೇವರನ್ನು ಕಾಣಲು ಸಾಧ್ಯವಿದೆ ಎಂದರು.

ಪಶ್ಚಿಮ ಬಂಗಾಳ ಬೇಲೂರು ರಾಮಕೃಷ್ಣ ಮಠದ ವಿಶ್ವಸ್ಥ ಸ್ವಾಮಿ ಮುಕ್ತಿದಾನಂದಜಿ ಆಶೀರ್ವಚನ ನೀಡಿ ಮಾತನಾಡಿ, ಸ್ವಚ್ಛ ಭಾರತ ಕಾರ್ಯಕ್ರಮದ ಮೂಲಕ ಮಂಗಳೂರಿನ ಜನಸಾಮಾನ್ಯರನ್ನು ಮಠದ ಕಡೆಗೆ ಬರಮಾಡಲಾಗಿದೆ. ಈ ಕಾರ್ಯಕ್ರಮ ಪರಿಪೂರ್ಣವಾಗಿ ನಡೆಸಿದ ಹೆಗ್ಗಳಿಕೆ ರಾಮಕೃಷ್ಣ ಮಠಕ್ಕೆ ಸಲ್ಲುತ್ತದೆ ಎಂದರು.

Edited By :
Kshetra Samachara

Kshetra Samachara

04/06/2022 10:59 pm

Cinque Terre

2.17 K

Cinque Terre

0

ಸಂಬಂಧಿತ ಸುದ್ದಿ