ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನ ಯಕ್ಷಗಾನ ಪ್ರಯೋಗವನ್ನು ಪ್ರೋತ್ಸಾಹಿಸಿ ಟ್ವೀಟ್ ಮಾಡಿದ ನಾಡದೊರೆ!

ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಳೆ ಮಂಗಳೂರಿನಲ್ಲಿ ನಡೆಯುವ ವಿನೂತನ ಯಕ್ಷಗಾನ ಪ್ರಯೋಗದ ಆಮಂತ್ರಣ ಪತ್ರವನ್ನು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.

ನಗರದ ಕದ್ರಿ ದೇವಾಲಯದ ರಾಜಾಂಗಣದಲ್ಲಿ ನಾಳೆ ಮಧ್ಯಾಹ್ನ 2ಗಂಟೆಗೆ ಆಯೋಜನೆಗೊಂಡಿರುವ 'ಶ್ರೀದೇವಿ ಲಲಿತೋಪಖ್ಯಾನ' ಯಕ್ಷಗಾನದ ಆಮಂತ್ರಣ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಮಂಗಳೂರಿನ ಸನಾತನ ಯಕ್ಷಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜನೆಗೊಂಡಿರುವ 'ಶ್ರೀದೇವಿ ಲಲಿತೋಪಖ್ಯಾನ' ಪ್ರಸಂಗದಲ್ಲಿ ಪ್ರಪ್ರಥಮ ಬಾರಿಗೆ 153 ಯಕ್ಷಗಾನ ವೇಷಧಾರಿಗಳು ಒಂದೇ ರಂಗಸ್ಥಳದಲ್ಲಿ ಮೇಳೈಸಿ ಇತಿಹಾಸ ಬರೆಯಲಿದೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಈ ವಿನೂತನ ಪ್ರಯೋಗಕ್ಕೆ ಶುಭ ಹಾರೈಸಿದ್ದಾರೆ.

Edited By :
Kshetra Samachara

Kshetra Samachara

04/06/2022 10:24 pm

Cinque Terre

4.6 K

Cinque Terre

1

ಸಂಬಂಧಿತ ಸುದ್ದಿ