ಮೂಡಬಿದ್ರೆ:ಜೂನ್ ತಿಂಗಳಲ್ಲಿ ಕರ್ನಾಟಕದಿಂದ ತೆರವುಗೊಳ್ಳಲಿರುವ ರಾಜ್ಯ ಸಭಾ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯಿಲಿಯವರನ್ನು ಆಯ್ಕೆ ಮಾಡುವಂತೆ ರಾಜ್ಯದ ಮಾಜಿ ಸಚಿವ ಕೆ ಅಭಯಚಂದ್ರ ಒತ್ತಾಯಿಸಿದ್ದಾರೆ. ಮೂಡುಬಿದಿರೆ ಪ್ರೆಸ್ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಭಯಚಂದ್ರ ಅವರು ಆಸ್ಕರ್ ಫೆರ್ನಾಂಡಿಸ್ ರಾಜ್ಯಸಭಾ ಸದಸ್ಯರಾಗಿದ್ದ ಕ್ಷೇತ್ರಕ್ಕೆ ಈ ಬಾರಿ ವೀರಪ್ಪ ಮೊಯಿಲಿಯವರನ್ನು ರಾಜ್ಯ ಕಾಂಗ್ರೆಸ ದೆಹಲಿ ಹೈಕಮಾಂಡ್ ಗೆ ಕಳುಹಿಸಿಕೊಡುವಂತೆ ಅವರು ಆಗ್ತಹಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೆರ, ವಕ್ತಾರ ರಾಜೇಶ್ ಕಡಲಕೆರೆ ಗೋಷ್ಠಿ ಯಲ್ಲಿದ್ದರು.
Kshetra Samachara
13/05/2022 04:57 pm