ಮುಲ್ಕಿ:ಬಪ್ಪನಾಡು ದೇವಳದ ಪರಿಸರದಲ್ಲಿ ಹಿಂದೂ ಬಾಂಧವರು ಹಾಕಿರುವ ಫ್ಲೆಕ್ಸ್ ಬಗ್ಗೆ ಮಾತಾಡುತ್ತಾ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರು ಫ್ಲೆಕ್ಸ್ ಹಾಕಿರುವರು ಪುಂಡು ಪೋಕರಿಗಳು ಎಂದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು ಖಂಡನೀಯವಾಗಿದೆ ಎಂದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಮಂಡಲಾಧ್ಯಕ್ಷ ಸುನಿಲ್ ಆಳ್ವ ಹೇಳಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ ಹಿಂದುಗಳು ಅವರ ಸಹಜವಾದ ಹಕ್ಕನ್ನು ಪ್ರತಿಪಾದಿಸಿರುತ್ತಾರೆ ,ಹಿಂದೂ ದೇವಳದ ಅಧಿನಿಯಮ ಕೂಡ ಅದನ್ನು ಪ್ರತಿಪಾದಿಸುತ್ತದೆ ,ಆದರೆ ನಿಮ್ಮ ತುಷ್ಟೀಕರಣ ನೀತಿಗಾಗಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ನಿಮ್ಮ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡಬಿದ್ರೆ ಖಂಡಿಸುತ್ತದೆ.ಹಾಗೂ ಮುಂದಿನ ದಿನದಲ್ಲಿ ಅದೇ ನೀವು ಹೇಳಿರುವ ಪುಂಡು ಪೋಕರಿಗಳು ಶಾಶ್ವತವಾಗಿ ಕಾಂಗ್ರೆಸ್ಗೆ ಗೋರಿ ಕಟ್ಟಲು ಸಿದ್ಧವಾಗಿ ನಿಂತಿದ್ದಾರೆ ಹಿಂದೂಗಳ ಭಾವನೆಯೊಂದಿಗೆ ಚೆಲ್ಲಾಟವಾಡಬೇಡಿ ಹಿಂದುತ್ವ ವಿರೋಧಿ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದಾರೆ.
Kshetra Samachara
25/03/2022 12:42 pm