ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಬಿಜೆಪಿಯವ್ರು ಕಾಶ್ಮೀರ್ ಫೈಲ್ಸ್ ನೋಡುವ ಮುನ್ನ ಮಂಗಳೂರು ಫೈಲ್ಸ್ ನೋಡುವ ಅಗತ್ಯವಿದೆ'

ಮಂಗಳೂರು: ಬಿಜೆಪಿಯವರು ದಿ ಕಾಶ್ಮೀರ್ ಫೈಲ್ಸ್ ನೋಡುವ ಮುನ್ನ ಮಂಗಳೂರು ಫೈಲ್ಸ್ ನೋಡುವ ಅಗತ್ಯವಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆಯಾಗಿ ಆರು ವರ್ಷ ಕಳೆಯಿತು. ಇಲ್ಲಿವರೆಗೂ ಬಾಳಿಗಾ ಕುಟುಂಬಕ್ಕೆ ನ್ಯಾಯ ದೊರಕಿಲ್ಲ. ಬಿಜೆಪಿ ಕಾರ್ಯಕರ್ತರಾಗಿದ್ದ ಬಾಳಿಗಾ ಪಕ್ಷಕ್ಕಾಗಿ ಸರ್ವ ರೀತಿಯಲ್ಲಿ ದುಡಿದಿದ್ದರು. ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುವ ಮುನ್ನ ಅವರ ಏಳು ವರ್ಷಗಳ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬ ಬಗ್ಗೆ ಯೋಚಿಸಲಿ ಎಂದರು.

ಹರ್ಷ ಮತ್ತು ಬೆಳ್ತಂಗಡಿಯ ದಿನೇಶ್ ಅವರ ಕೊಲೆಯಾಗಿದೆ. ಹರ್ಷ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ದಿನೇಶ್ ಕುಟುಂಬಕ್ಕೆ ಕೇವಲ 8 ಲಕ್ಷ ರೂಪಾಯಿ ನೀಡಲಾಗಿದೆ. ಯಾವ ಆಧಾರದ ಮೇಲೆ ಇಷ್ಟು ಕಡಿಮೆ ಪರಿಹಾರ ನೀಡಿರುವುದು ಎಂದು ಪ್ರಶ್ನಿಸಿದರು.

Edited By :
Kshetra Samachara

Kshetra Samachara

22/03/2022 07:29 pm

Cinque Terre

5.07 K

Cinque Terre

1

ಸಂಬಂಧಿತ ಸುದ್ದಿ