ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಕಾನೂನಿಗೆ ಗೌರವ ನೀಡದ ವಿದ್ಯಾರ್ಥಿಗಳ ಹೈ ಡ್ರಾಮಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಕಿಡಿ

ಕಾವೂರು: *ಕಾವೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ಗಲಾಟೆ ಬಿಟ್ಟು ತರಗತಿಯಲ್ಲಿ ಕುಳಿತು ಶಿಕ್ಷಣ ಕೇಳುವುದರ ಬದಲು ಅನಾರೋಗ್ಯದ ಹೈ ಡ್ರಾಮ ನಡೆಸಿ ಶಿಕ್ಷಣ ಸಂಸ್ಥೆ, ಶಿಕ್ಷಕರಿಗೆ ಕೆಟ್ಟ ಹೆಸರು ತರಲು ನಡೆಸುತ್ತಿರುವ ಪ್ರಯತ್ನಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹಲವು ವರ್ಷಗಳಿಂದ ಇದೇ ಶಿಕ್ಷಕರಿಂದ ಪಾಠ ಕಲಿತ ನೀವು ಇದೀಗ ಬಾಹ್ಯ ಮತೀಯ ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿ ಶಿಕ್ಷಕರ ವಿರುದ್ದ ಆರೋಪ ಮಾಡುತ್ತಿದ್ದೀರಿ.ಶಿಕ್ಷಕರು ನ್ಯಾಯಾಲಯದ ಆದೇಶದಂತೆ ಕಾನೂನು ಪಾಲಿಸಿದ್ದಾರೆ.

ಅವರ ವಿರುದ್ದ ವಿನಾ ಕಾರಣ ಅಪಪ್ರಚಾರ ನಡೆಸುತ್ತಿರುವುದು ಸಹಿಸಲಾಗದು. ನ್ಯಾಯಾಲಯದ ಆದೇಶ ಪಾಲಿಸದೆ ಹೊರಗೆ ನಿಂತು ನಾಟಕ ಪ್ರದರ್ಶನ ಮಾಡುವ ಅಗತ್ಯವಿಲ್ಲ.ಶಿಕ್ಷಣದಲ್ಲಿ ಆಸಕ್ತಿ ಇರುವವರು ತರಗತಿಗೆ ಹೋಗಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ.ಸರಕಾರ ಶಿಕ್ಷಣಕ್ಕೆ ಮುಕ್ತ ಅವಕಾಶ ನೀಡಿದ್ದು ಉತ್ತಮವಾಗಿ ಕಲಿತು ಮುಖ್ಯವಾಹಿಗೆ ಬರಬೇಕೆನ್ನುವುದು ಸರಕಾರದ ಆಶಯ.

ಶಿಕ್ಷಕರ ವಿರುದ್ದ ಅವಮಾನಿಸುವ ಹೇಳಿಕೆ ನೀಡುವವರನ್ನು ಹಾಗೂ ಈ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಸಂಘಟನೆ ಸದಸ್ಯರ ಮೇಲೆ ನಿಗಾ ಇರಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

19/02/2022 09:38 pm

Cinque Terre

2.23 K

Cinque Terre

1

ಸಂಬಂಧಿತ ಸುದ್ದಿ