ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲ್ಲಮುಂಡ್ಕೂರು: ವಿವಿಧ ಕಾಮಗಾರಿಗಳ ಉದ್ಘಾಟನೆ

ಮೂಡಬಿದ್ರೆ:ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಮುಲ್ಕಿ -ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು.

ನಿಡ್ಡೋಡಿ ಗ್ರಾಮದ ಕೊಲತ್ತಾರು ಸ್ಮಶಾನ ಉದ್ಘಾಟನೆ,ಕೊಲತ್ತಾರು ಘನತ್ಯಾಜ್ಯ ಘಟಕಕ್ಕೆ ಶಿಲಾನ್ಯಾಸ ಕುದ್ರಿಪದವು ಅಂಗನವಾಡಿ ಉದ್ಘಾಟನೆ, ಪಂಚಾಯತ್ ಸಂಜೀವಿನಿ ಕಟ್ಟಡ ಉದ್ಘಾಟನೆ, ನಿಡ್ಡೋಡಿ ಗ್ರಾಮದ ಗುಂಡೇಲು ಮರಿಪಾದೆ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನಡೆಯಿತು.

ಈ ಸಂದರ್ಭ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/01/2022 10:36 am

Cinque Terre

1.39 K

Cinque Terre

0

ಸಂಬಂಧಿತ ಸುದ್ದಿ