ಮುಲ್ಕಿ: ಕಿನ್ನಿಗೋಳಿ ಯನ್ನು ಮಾತ್ರ ಪಟ್ಟಣ ಪಂಚಾಯತ್ ಮಾಡಬೇಕು. ಮೆನ್ನಬೆಟ್ಟು, ಕೊಡೆತ್ತೂರು, ಕಿಲೆಂಜೂರು, ಕಟೀಲು ಕೃಷಿ ಆಧಾರಿತ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯತ್ ಮಾಡಿರುವುದಕ್ಕೆ ಕಾಂಗ್ರೆಸ್ ತನ್ನ ವಿರೋಧವಿದೆ ಎಂಬ ಆರೋಪಕ್ಕೆ ಅರ್ಥವಿಲ್ಲ ಮೂಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಸೇರಿಸಿ ಪಟ್ಟಣ ಪಂಚಾಯತ್ ಆಗುವ ನಿಟ್ಟಿನಲ್ಲಿ 2003ರಿಂದ 2012, 2017ರಲ್ಲಿ ಗ್ರಾಮ ಪಂಚಾಯತ್ ಗ್ರಾಮ
ಸಭೆಯಲ್ಲಿ ನಿರ್ಣಯಗಳು ಆಗಿದ್ದು, ಈ ಸಂದರ್ಭದಲ್ಲಿ ಮಾಜಿ ಶಾಸಕರು ಸಹ 2017ರಲ್ಲಿ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ಗಳ ಗ್ರಾಮ ಸಭೆಗಳ ನಿರ್ಣಯ ಆಧರಿಸಿ ಪಟ್ಟಣ ಪಂಚಾಯತ್ ಮಾಡುವಲ್ಲಿ ಜಿಲ್ಲಾಧಿಕಾರಿ, ಕಾರ್ಯದರ್ಶಿಗಳಿಗೆ ಹಾಗೂ ಅಂದಿನ ಸಚಿವ ಈಶ್ವರ ಖಂಡ್ರೆಗೆ ಶಿಫಾರಸು ಮಾಡಿದ್ದರು ಎಂದರು.
ಮೆನ್ನಬೆಟ್ಟು ಹಾಗೂ ಕಿನ್ನಿಗೋಳಿಯ ಗ್ರಾ.ಪಂ. ನ ಗ್ರಾಮ ಸಭೆಯಲ್ಲಿ ಆಗಿನ ಆಡಳಿತ ಮಂಡಳಿ ಜನಸಂಖ್ಯೆ ಆಧರಿಸಿ ಮಾಡಲು ಒಪ್ಪಿಗೆ ಹಾಗೂ ಹಲವು ಗ್ರಾಮ ಸಭೆಗಳಲ್ಲಿ ಕೂಗು ಕೇಳಿ ಬರುತ್ತಿತ್ತು, ಮುಂದಕ್ಕೆ ಅಭಿವೃದ್ಧಿಯ ದೃಷ್ಟಿಯಲ್ಲಿ ತೆರಿಗೆ ಇನ್ನಿತರ ವಿಷಯಗಳ ಬಗ್ಗೆ ಸರಳಗೊಳಿಸಿ ಜನರಿಗೆ ಹೊರೆಯಾಗದಂತೆ ಸರಿಸಡಿಸುವಂತೆ ಶಾಸಕರಿಗೆ ಮನವಿ ಮಾಡಲಾಗುವುದು ಎಂದರು.
ದಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರ್ ಕಟೀಲು ಮಾತನಾಡಿ, ರಾಜ್ಯದಲ್ಲಿ 136 ಗ್ರಾ.ಪಂ.ಗಳು ಪಟ್ಟಣ ಪಂಚಾಯತ್ ಆಗಿದೆಎಲ್ಲಿಯೂ ಅಪಸ್ವರ ಇಲ್ಲ ಆದರೆ ಕಿನ್ನಿಗೋಳಿ ಪಟ್ಟಣ ಆಗುವುದಕ್ಕೆ ಮಾತ್ರ ಘೋಷಣೆ ಆಗಿ 6 ತಿಂಗಳುಗಳ ಬಳಿಕ ಅಪಸ್ವರ ಎದ್ದಿದೆ. ಇದರ ಹಿಂದೆ ಕುಮ್ಮಕ್ಕು ಇದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಭುವನಾಭಿರಾಮ ಉಡುಪ, ಮಂಡಲದ ಕಾರ್ಯದರ್ಶಿ ಕೇಶವ ಕರ್ಕೇರ ಉಪಸ್ಥಿತರಿದ್ದರು.
Kshetra Samachara
29/12/2021 03:58 pm