ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಪಕ್ಷದ ಸಂಘಟನೆಯ ಮೂಲಕ ಗುರುತಿಸಿಕೊಳ್ಳಿ: ಕೆ ಅಭಯಚಂದ್ರ

ಮುಲ್ಕಿ:ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷರಾದ ಅಶೋಕ್ ಪೂಜಾರ ರವರು ಬಿಡುಗಡೆಗೊಳಿಸಿ, ಪದಾಧಿಕಾರಿಗಳಿಗೆ ಆದೇಶದ ಪ್ರತಿಯನ್ನು ಮಾಜಿ ಸಚಿವರಾದ ಕೆ ಅಭಯಚಂದ್ರ ಮತ್ತು ಚುನಾವಣೆ ಉಸ್ತುವಾರಿ ಆದ ಮಿಥುನ್ ರೈ ಯವರ ಮುಖಾಂತರ ಹಳೆಯಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾಜೀ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಪಕ್ಷದಲ್ಲಿ ನಿಷ್ಠಾವಂತ ರಾಗಿ ದುಡಿಯುವ ಕಾರ್ಯಕರ್ತರಿಗೆ ಬೆಲೆ ಇದೆ. ಸಂಘಟನೆ ಬಲಪಡಿಸುವ ಮೂಲಕ ಮುಂಬರುವ ಚುನಾವಣೆಗಳಿಗೆ ಸಿದ್ಧರಾಗಿ ಎಂದರು.

ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳೂರು, ರಾಜ್ಯ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮೇರಿಲ್ ರೇಗೊ, ಸರ್ಫಾಸ್, ಮುಲ್ಕಿ ನಪಂ ಸದಸ್ಯರಾದ ಪುತ್ತುಭಾವ ಮೊದಲಾದವರು ವೇದಿಕೆಯಲ್ಲಿ ಇದ್ದರು

Edited By : PublicNext Desk
Kshetra Samachara

Kshetra Samachara

05/08/2021 10:57 am

Cinque Terre

1.82 K

Cinque Terre

0

ಸಂಬಂಧಿತ ಸುದ್ದಿ