ಮುಲ್ಕಿ: ಹಳೆಯಂಗಡಿ ಗ್ರಾಪಂನಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷೆ ಪೂರ್ಣಿಮಾ ಮತ್ತು ಉಪಾಧ್ಯಕ್ಷ ಅಶೋಕ್ ಬಂಗೇರ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ವಿಜಯೋತ್ಸವ ಆದಿತ್ಯವಾರ ಹಳೆಯಂಗಡಿಯಲ್ಲಿ ನಡೆಯಿತು.
ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಚಾಲನೆ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಹಳೆಯಂಗಡಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗ್ರಾಮಸ್ಥರ ಆಶೋತ್ತರ ಈಡೇರಿಸಲು ಸಿದ್ಧರಾಗಿದ್ದಾರೆ. ಉತ್ತಮ ಆಡಳಿತ ನೀಡಿ ಜನ ಮನ್ನಣೆ ಗಳಿಸಿ ಎಂದು ಪಂ. ಸದಸ್ಯರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ ಹಾಗೂ ಸದಸ್ಯರಾದ ನಾಗರಾಜ್, ಚಂದ್ರಿಕಾ ಪ್ರದೀಪ್ ಕೋಟ್ಯಾನ್, ವಿನೊದ್ ಕುಮಾರ್, ಸುರೇಖ,ಅಶ್ವಿನ್, ಜಯಂತಿ, ಲೀಲಾ,ಸವಿತಾ, ಮಲ್ಲಿಕಾ ಅವರನ್ನು ಶಾಸಕರು ಗೌರವಿಸಿದರು.
ವಿಜಯೋತ್ಸವ ಮೆರವಣಿಗೆ ಹಳೆಯಂಗಡಿ ಶ್ರೀ ಜಾರಂದಾಯ ದೈವಸ್ಥಾನದಿಂದ ಆರಂಭಗೊಂಡು, ಪಾವಂಜೆ ಮಾರ್ಗವಾಗಿ ಅರಂದ್, ಕೊಳುವೈಲು,ಕದಿಕೆ, ಸಸಿಹಿತ್ಲು, ಸಂತೆಕಟ್ಟೆ, ಹಳೆಯಂಗಡಿ ಪೇಟೆ, ಸಾಗ್,ಇಂದಿರಾನಗರ,ಕೊಪ್ಪಲ ಮಾರ್ಗವಾಗಿ ಹಳೆಯಂಗಡಿ ವರೆಗೆ ನಡೆಯಿತು.
ತಾಪಂ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಬಿಜೆಪಿ ಮುಖಂಡರಾದ ಸತೀಶ್ ಭಟ್ ಕೊಳುವೈಲು, ಸುಖೇಶ್ ಶೆಟ್ಟಿ ಶಿರ್ತಾಡಿ,ವಿಠಲ ಎನ್‌ಎಂ, ಮನೋಜ್ ಕೆಲೆಸಿಬೆಟ್ಟು ಮತ್ತಿತರರು ನೇತೃತ್ವ ವಹಿಸಿದ್ದರು.
Kshetra Samachara
14/02/2021 08:36 pm