ಮಂಗಳೂರು: ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಪಂನಲ್ಲಿ ಬಿಜೆಪಿ-ಎಸ್‌ಡಿಪಿಐ ಮೈತ್ರಿ ಆಡಳಿತ ರಚನೆಯಾಗಿದ್ದು, ಈ ಒಳ ಒಪ್ಪಂದ ಚುನಾವಣೆಗೂ ಮೊದಲೇ ನಡೆದಿತ್ತು ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ನಾವು ಮನಸ್ಸು ಮಾಡಿದ್ದರೆ ಅಧಿಕಾರಕ್ಕೆ ಏರಬಹುದಿತ್ತು. ಆದರೆ, ಸಾಮಾಜಿಕ ತತ್ವ- ಸಿದ್ಧಾಂತ ಗುರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ, ಬಿಜೆಪಿ- ಎಸ್‌ಡಿಪಿಐನವರು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಅವಕಾಶವಾದಿ ರಾಜಕಾರಣ ಎಂದು ಆರೋಪಿಸಿದರು.
ಪಾವೂರು ಗ್ರಾಪಂನಲ್ಲಿ ಕಾಂಗ್ರೆಸ್‌ಗೆ 5 ಸ್ಥಾನ ಸಿಕ್ಕಿದ್ದರೆ, ಎಸ್‌ಡಿಪಿಐಗೆ 6, ಬಿಜೆಪಿಗೆ 4 ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಯಾರೊಂದಿಗೂ ಒಪ್ಪಂದಕ್ಕೆ ಮುಂದಾಗಿರಲಿಲ್ಲ. ಕೊನೆಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಎಸ್‌ಡಿಪಿಐ ಅಧಿಕಾರದ ಚುಕ್ಕಾಣಿ ಹಿಡಿದಿದೆ.
Kshetra Samachara
11/02/2021 10:37 pm