ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎನ್ಎಸ್‌ಯುಐ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನ

ಮಂಗಳೂರು: ದ.ಕ. ಜಿಲ್ಲಾ ಎನ್ಎಸ್‌ಯುಐ ವತಿಯಿಂದ ಇಂದು ನಗರದ ಪಾಂಡೇಶ್ವರದ ಶ್ರೀನಿವಾಸ ಕಾಲೇಜ್ ನಲ್ಲಿ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನ ನಡೆಯಿತು.

ಎನ್ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ಎನ್ಎಸ್‌ಯುಐ ಪದಾಧಿಕಾರಿಗಳು ಕಾಲೇಜು ಶುಲ್ಕ, ಸ್ಕಾಲರ್ ಶಿಪ್, ಬಸ್ ಪಾಸ್, ರ್ಯಾಗಿಂಗ್, ಮಾದಕ ದ್ರವ್ಯ ಮತ್ತಿತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

ಈಗಾಗಲೇ ದ.ಕ. ಜಿಲ್ಲೆಯ ಮಂಗಳೂರು, ಸುಳ್ಯ, ಮೂಡುಬಿದಿರೆ ಸೇರಿ ಏಳು ಕಾಲೇಜುಗಳಲ್ಲಿ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನ ನಡೆಸಲಾಗಿದ್ದು, ಬಹಳಷ್ಟು ವಿದ್ಯಾರ್ಥಿಗಳು ಕಾಲೇಜಿನ ಪೂರ್ಣ ಶುಲ್ಕ ಪಾವತಿ ಬಗ್ಗೆ ದೂರಿದ್ದಾರೆ. ಈ ಬಗ್ಗೆ ದ.ಕ. ಜಿಲ್ಲೆಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ 20 ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಬಳಿಕ ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಡಿ.ಸಿ. ಮೂಲಕ ಸಿಎಂ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಎನ್ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಹೇಳಿದರು.

ಅಭಿಯಾನದಲ್ಲಿ ಎನ್ಎಸ್‌ಯುಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ, ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಶೇಖ್ ಅಫ್ಸಾನ್, ಶ್ರೀನಿವಾಸ್ ಕಾಲೇಜು ಎನ್ಎಸ್‌ಯುಐ ಘಟಕದ ಅಧ್ಯಕ್ಷ ತಮೀಝ್ ಅಳಕೆಮಜಲು, ಉಡುಪಿ ಜಿಲ್ಲಾ ಎನ್ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಮಸೂದ್, ದಕ್ಷಿಣ ಕನ್ನಡ ಜಿಲ್ಲಾ ‌ಎನ್ಎಸ್‌ಯುಐ ಸಂಯೋಜಕ ನಜೀಬ್ ಮಂಚಿ ಶ್ರೀನಿವಾಸನ್ ಕಾಲೇಜು ಎನ್ಎಸ್‌ಯುಐ ಘಟಕದ ಸದಸ್ಯರಾದ ಶ್ರೇಯಸ್, ಅ್ಯಸ್ಟನ್, ದಿವ್ಯಪ್ರಜ್ವಲ್, ವಿನೋದ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

01/02/2021 08:27 pm

Cinque Terre

3.78 K

Cinque Terre

0

ಸಂಬಂಧಿತ ಸುದ್ದಿ