ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಳ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂದನಾ ಸಮಾರಂಭ

ಬಂಟ್ವಾಳ: ಅರಳ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ನೂತನ ಸದಸ್ಯರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭ ಮೂಲರಪಟ್ನದ ಹಿತ್ತಿಲು ಮೈದಾನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ವಹಿಸಿದ್ದರು. ನೂತನ ಸದಸ್ಯರಾದ ಅಶ್ರಫ್ ಎಂ.ಬಿ. ದೇಜಪ್ಪ, ಹಮೀದಾ ಬಾನು, ಪ್ರೇಮಾ, ನಳಿನಿ ಹಾಗೂ ಬಡಗಬೆಳ್ಳೂರು ಗ್ರಾಪಂ ಸದಸ್ಯರಾದ ಎಂ.ಎ.ಹಾಜಬ್ಬರನ್ನು ಅಭಿನಂದಿಸಲಾಯಿತು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪುರಂದರ ಶೆಟ್ಟಿ, ಓಝಿಯಂ ಡಿಸೊಜಾ, ಅಶೋಕ್ ಅರಳ, ಪೂರ್ಣಿಮಾ, ಶೊಭಾ, ಜಗದೀಶ್ ಕೊಲ, ದನಂಜಯ ಶೆಟ್ಟಿ ಅವರನ್ನೂ ಇದೇ ವೇಳೆ ಅಭಿನಂದಿಸಲಾಯಿತು.

ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಜಗದೀಶ್ ಕೊಯಿಲ, ಅರಳ ವಲಯಾಧ್ಯಕ್ಷ ಅಶ್ರಫ್, ಮೂಲರಪಟ್ನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲತೀಫ್ ಎಂ.ಪಿ., ಜಿ.ಎಚ್.ಎಂ. ಅಧ್ಯಕ್ಷ ಹಂಝ ಗುತ್ತು, ಶಾಲಿ ಎಂ.ಎಸ್., ಎಂ. ಮುಹಮ್ಮದ್, ಎಂ.ಇಬ್ರಾಹೀಂ ಆಝಾದ್ ನಗರ, ಹಿದಾಯತುಲ್ಲಾ, ಲತೀಫ್ ಶುಂಠಿಹಿತ್ತಿಲು, ಅಬ್ದುಲ್ ಖಾದರ್ ಜಾಸ್ಮಿನ್, ಹನೀಫ್ ಪಾದೆ, ಧನಂಜಯಶೆಟ್ಟಿ ಅರಳ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. ನ್ಯಾಯವಾದಿ ಮುಹಮ್ಮದ್ ಅನ್ಸಾರ್ ಮೂಲರಪಟ್ನ ಸ್ವಾಗತಿಸಿದರು. ಶಾಕೀರ್ ಮೂಲರಪಟ್ನ ಕಾರ್ಯಕ್ರಮವನ್ನು ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

18/01/2021 08:22 pm

Cinque Terre

3.22 K

Cinque Terre

0

ಸಂಬಂಧಿತ ಸುದ್ದಿ