ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮಾಜಿ ಸಚಿವ ಅಭಯಚಂದ್ರರಿಂದ ಕರಾಟೆ ಕಿಟ್ ಕೊಡುಗೆ

ಮೂಡುಬಿದಿರೆ: ಅಂತಾರಾಷ್ಟ್ರೀಯ ಕರಾಟೆ ಪಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ ಪಾಲಡ್ಕ ಅವರಿಗೆ 35,000 ರೂ. ಮೊತ್ತದ ಕರಾಟೆಗೆ ಸಂಬಂಧಿಸಿದ ವಿವಿಧ ಉಡುಗೆ-ತೊಡುಗೆಗಳ ಕಿಟ್ ಅನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ತಮ್ಮ ಕೊಡುಗೆಯಾಗಿ ಭಾನುವಾರ ಪ್ರೆಸ್ ಕ್ಲಬ್‍ನಲ್ಲಿ ನೀಡಿದರು.

ನಂತರ ಮಾತನಾಡಿದ ಅಭಯಚಂದ್ರ ಜೈನ್, ಭಾಸ್ಕರ ಅವರ ಕ್ರೀಡಾ ಸಾಧನೆಗಳಿಗೆ ಪ್ರೋತ್ಸಾಹ ನೀಡಲು ತನಗೆ ಸಂತಸವಾಗುತ್ತಿದೆ. `ಕರಾಟೆ ಪಟುಗಳಿಗೆ ಕ್ರೀಡಾ ಇಲಾಖೆಯ ಮೂಲಕ ವಿಶೇಷ ಸವಲತ್ತು ನೀಡಲು ಇದುವರೆಗೆ ಅವಕಾಶ ಕಲ್ಪಿಸಲಾಗಿಲ್ಲ. ಇದೀಗ ಅವಕಾಶ ಒದಗಿ ಬಂದಿದೆ ಎಂದರು.

ಭಾಸ್ಕರ ಮಾತನಾಡಿ, ದೇಶ ವಿದೇಶಗಳಲ್ಲಿ ನಡೆದ ಹಲವು ಕೂಟಗಳಲ್ಲಿ ಪಾಲ್ಗೊಳ್ಳಲು ತನಗೆ ಅಭಯಚಂದ್ರ ಅವರು ನಿರಂತರ ಸಹಾಯ ಮಾಡುತ್ತಾ ಬಂದಿದ್ದು, ಇದುವರೆಗೆ ಅನ್ಯರಿಂದ ಎರವಲು ಪಡೆದುಕೊಂಡ ಕರಾಟೆ ಉಡುಗೆ- ತೊಡುಗೆ ಬಳಸಿಕೊಳ್ಳುವ ತನ್ನ ಪರಿಸ್ಥಿತಿ ಗಮನಿಸಿ ತನಗೆ ಈ ಕಿಟ್ ನೀಡಿ ಬಹಳಷ್ಟು ಉಪಕಾರ ಮಾಡಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಸಾಧನೆ ಮಾಡಲು ಖಂಡಿತಾ ಪ್ರಯತ್ನಿಸುತ್ತೇನೆ ಎಂದರು.

Edited By : Vijay Kumar
Kshetra Samachara

Kshetra Samachara

18/01/2021 11:04 am

Cinque Terre

4.33 K

Cinque Terre

0

ಸಂಬಂಧಿತ ಸುದ್ದಿ