ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ಮಜ್ಲಿಸುನ್ನೂರ್, ಗ್ರಾ.ಪಂ. ನೂತನ ಸದಸ್ಯಗೆ ಸನ್ಮಾನ

ಮಂಗಳೂರು: ಮುಹಿಯುದ್ದೀನ್ ಬೊಳ್ಳೂರು ಜುಮಾ ಮಸೀದಿಯ ಅಧೀನದಲ್ಲಿರುವ ಪಕ್ಷಿಕೆರೆ ಹೊಸಕಾಡು ದಾರುಲ್ ಉಲೂಮ್ ಮದರಸದಲ್ಲಿ ಮಜ್ಲಿಸುನ್ನೂರ್ ಹಾಗೂ ಗ್ರಾಪಂನ ಸ್ಥಳೀಯ ನೂತನ ಸದಸ್ಯ ಮಯ್ಯದ್ದಿ ಅವರಿಗೆ ಸನ್ಮಾನ ಮದರಸದ ವಠಾರದಲ್ಲಿ ರವಿವಾರ ರಾತ್ರಿ ನಡೆಯಿತು.

ಮಜ್ಲಿಸುನ್ನೂರ್‌ನ ನೇತೃತ್ವವನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ವಹಿಸಿದ್ದರು.

ಈ ಸಂದರ್ಭ ಹೊಸಕಾಡು ಪ್ರದೇಶದ ನೂತನ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಮಯ್ಯದ್ದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಶಂಶುದ್ದೀನ್ ಕಟ್ಟೆಪುಣಿ, ಮಾಜಿ ಅಧ್ಯಕ್ಷ ಎ.ಕೆ. ಜೀಲಾನಿ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ದಾರುಲ್ ಉಲೂಮ್ ಮದರಸ ಸಮಿತಿ ಅಧ್ಯಕ್ಷ ಶಂಶುದ್ದೀನ್ ಹೊಸಕಾಡು, ಸಿರಾಜುದ್ದೀನ್ ಫೈಝಿ ಚಾರ್ಮಾಡಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

04/01/2021 10:56 pm

Cinque Terre

7.24 K

Cinque Terre

0

ಸಂಬಂಧಿತ ಸುದ್ದಿ