ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ದಮನಕಾರಿ ನೀತಿಯ ಮೋದಿ ಸರಕಾರವನ್ನು ಪರಾಭವಗೊಳಿಸಬೇಕಿದೆ'

ನರೇಂದ್ರ ಮೋದಿ ಅವರ ಸರಕಾರದ ದಮನಕಾರಿ ನೀತಿ ದೇಶಕ್ಕೆ ಅಪಾಯಕಾರಿಯಾಗಿದ್ದು, ಅದನ್ನು ಈ ದೇಶದ ಪ್ರಜೆಗಳು ಪರಾಭವಗೊಳಿಸಬೇಕು ಎಂದು ಕೇರಳದ ಮಾಜಿ ಸಚಿವ ಕೆ.ಟಿ.ಜಲೀಲ್ ಕರೆ ನೀಡಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ರಾಜ್ಯಮಟ್ಟದ ಮುಸ್ಲಿಂ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸರಕಾರವು ಬ್ರಿಟೀಷರಂತೆ ಒಡೆದು ಆಳುವ ನೀತಿಯನ್ನು ಅನುಸರಿಸಿ ಅಧಿಕಾರಕ್ಕೆ ಬಂದಿದೆ. ಉತ್ತರ ಪ್ರದೇಶದಲ್ಲಿ 80-20 ಎಂದು ಜನರನ್ನು ವಿಭಜಿಸಲು ನೋಡಿದರೂ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷಕ್ಕೆ ಲಭ್ಯವಾಗಿರುವ ಮತವನ್ನು ನೋಡುವಾಗ ಭಾರತಕ್ಕೆ ಇನ್ನೂ ಭವಿಷ್ಯವಿದೆ. ಭಾರತೀಯರು ಜಾತಿ‌ ಧರ್ಮ ಎಂಬ ಮನೋಭಾವವನ್ನು ತೊರೆದು ಒಂದಾಗಿ ಮತ ನೀಡುತ್ತಾರೋ ಆಗ ಭಾರತದಲ್ಲಿ ಸಂಘಪರಿವಾರ, ಬಿಜೆಪಿ ನಾಶವಾಗುತ್ತದೆ ಎಂದು ಹೇಳಿದರು.

ಕಳೆದ 8 ವರ್ಷಗಳಿಂದ ದೇಶವನ್ನು ಆಳುತ್ತಿರುವ ಮೋದಿ ಸರಕಾರ ಧರ್ಮ, ಮತ, ವಸ್ತ್ರದ ಆಧಾರದಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲು ಹೊರಟಿದೆ. ಈ ರಾಷ್ಟ್ರದಿಂದ ಸಮುದಾಯವೊಂದನ್ನು ಹೊರಗಿಡಲು ಯತ್ನಿಸುತ್ತಿದೆ. ಆದರೆ ಅಲ್ಪಸಂಖ್ಯಾತರನ್ನು ಮೂಲೆಗಿರಿಸಿ ಅಭಿವೃದ್ಧಿ ಅಸಾಧ್ಯ ಎಂಬುದು ಅವರು ತಿಳಿಯಬೇಕಿದೆ. ಗಲ್ಫ್ ರಾಷ್ಟ್ರ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸರ್ವಧರ್ಮಗಳ ಸಮಬಾಳ್ವೆಗಳನ್ನು ಕಾಣುತ್ತಿದ್ದೇವೆ. ಆ ರಾಷ್ಟ್ರಗಳು ಮುಂದುವರಿಯುತ್ತಿವೆ. ಗಲ್ಫ್ ರಾಷ್ಟ್ರದಲ್ಲಿ ದೇವಾಲಯ ನಿರ್ಮಾಣ ಸಾಧ್ಯವಾದರೆ ಅಂತಹ ಮಾದರಿ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ.‌ ಮತಾಧಾರಿತವಾದ ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಜನರು ಜೀವಿಸಲು ಕಷ್ಟಪಡುತ್ತಿದ್ದಾರೆ. ಆದ್ದರಿಂದ ನಮ್ಮ ದೇಶವನ್ನು ನಾವು ಹಾಗಾಗಲು ಬಿಡಬಾರದು ಎಂದು ಕೆ.ಟಿ.ಜಲೀಲ್ ಹೇಳಿದರು.

Edited By :
Kshetra Samachara

Kshetra Samachara

31/05/2022 08:29 pm

Cinque Terre

8.46 K

Cinque Terre

5

ಸಂಬಂಧಿತ ಸುದ್ದಿ