ಇಂದಿನ ಯುವ ಜನಾಂಗಕ್ಕೆ ಹಿಂದೂ ಧಾರ್ಮಿಕ ವಿಚಾರಗಳನ್ನು ತಿಳಿಸಿ ಅವರನ್ನು ಆಸ್ತಿಕರನ್ನಾಗಿಸಿ ದೇಶದ ಸುಸಂಸ್ಕೃತ ಪ್ರಜೆಯನ್ನಾಗಿ ರೂಪಿಸುವುದು ಹಿರಿಯರ ಆದ್ಯ ಕರ್ತವ್ಯ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಮುಲ್ಕಿ ಕೆಎಸ್ ರಾವ್ ನಗರದ ವೀರ ಕೇಸರಿ ತರುಣ ವೃಂದದ ಆಶ್ರಯದಲ್ಲಿ ನಡೆದ 12ನೇ ವರ್ಷದ ಯುಗಾದಿ ಉತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಮುಖ ಪ್ರದೀಪ್ ಸರಿಪಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿಂದೂ ಹಬ್ಬ ಹರಿದಿನಗಳ ಮಹತ್ವವನ್ನು ಯುವ ಸಮಾಜಕ್ಕೆ ತಿಳಿಸುವುದು ಹಾಗೂ ಪ್ರತೀ ಮನೆಗಳಲ್ಲಿ ಹಬ್ಬಗಳನ್ನು ಸರಿಯಾದ ರೀತಿಯಲ್ಲಿ ಆಚರಿಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ವ್ಯವಸ್ಥೆ ಸಮಾಜದ ಹಿರಿಯರಿಂದ ನಡೆಯಬೇಕು ಎಂದರು.
ಕರ್ನಾಟಕ ದಕ್ಷಿಣ ಪ್ರಾಂತ ಭಜರಂಗ ದಳ ಸಹ ಸಂಯೋಜಕ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯರಾದ ದೇವೇಂದ್ರ ಕುಕನೂರು, ವಿಠ್ಠಲ್ ಎನ್.ಎಂ., ವೀರ ಕೇಸರಿ ಯುವಕ ವೃಂದ ಅಧ್ಯಕ್ಷ ಪ್ರಶಾಂತ್ ಕೆ., ಉಪಾಧ್ಯಕ್ಷ ಅರ್ಜುನ್ ತಳವಾರ್, ಸಂಚಾಲಕರಾದ ಮಲ್ಲಣ್ಣ ಗೌಡ್ರು,ಮಣಿಕಂಠ, ಕಾರ್ಯದರ್ಶಿ ಉಮೇಶ್ ಮುಲ್ಕಿ ಮತ್ತು ಲಿಂಗ ಪೂಜಾರಿ, ಮುತ್ತುರಾಜ ಉಪ್ಪಾರ , ಶ್ರವಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಕೊಂಡಗೂಳಿ ಸ್ವಾಗತಿಸಿದರು. ವೀರಭದ್ರಯ್ಯ ಹಿರೇಮಠ ಮತ್ತು ರೇಖಾ ನಿರೂಪಿಸಿದರು. ಶಶಿಕುಮಾರ್ ನೆಲೋಗಿ ವಂದಿಸಿದರು.
Kshetra Samachara
04/04/2022 05:53 pm