ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ಮುಲ್ಕಿ ಎಸ್ಐ ಮಂಗಳೂರಿಗೆ ಎತ್ತಂಗಡಿ?.

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಉಪನಿರೀಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದ ಶೀತಲ್ ಅಲಗೂರು ಅವರನ್ನು ಏಕಾಏಕಿ ಮಂಗಳೂರಿನ ಪಾಂಡೇಶ್ವರ ಠಾಣೆಗೆ ವರ್ಗಾವಣೆ ಬಗ್ಗೆ ಅನೇಕ ಸಂಶಯ ವ್ಯಕ್ತವಾಗುತ್ತಿದೆ.

ಮುಲ್ಕಿ ಠಾಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಸೈ ಶೀತಲ್ ಅಲಗೂರು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನೇಕ ಅಕ್ರಮ ದಂಧೆಗಳಾದ ಕೋಳಿ ಅಂಕ, ಮರಳು, ಮಟ್ಕಾ ದಂಧೆಗಳಿಗೆ ಕಡಿವಾಣ ಹಾಕುವಲ್ಲಿ ಬಹಳಷ್ಟು ಶ್ರಮಿಸಿದ್ದರು.

ವರ್ಷ ಹಿಂದೆ ಸುರತ್ಕಲ್ ನಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಹಿಡಿಯುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಆದರೆ, ಕೆಲ ದಿನಗಳ ಹಿಂದೆ ಮುಲ್ಕಿ ಠಾಣೆಯಲ್ಲಿ ಬಿಜೆಪಿ ನಾಯಕನೊಬ್ಬನಿಗೆ ರೌಡಿಶೀಟರ್ ಹಾಕುವ ಪ್ರಕರಣಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಇದರಿಂದ ಕೆಂಡಾಮಂಡಲವಾದ ಸ್ಥಳೀಯ ಬಿಜೆಪಿ ನಾಯಕರು ಶಾಸಕರಿಗೆ ದೂರು ನೀಡಿ ಮುಲ್ಕಿ ಎಸ್ಸೈ ಶೀತಲ್ ಅವರನ್ನು ಮಂಗಳೂರಿನ ಪಾಂಡೇಶ್ವರ ಠಾಣೆಯ ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ವಿಭಾಗಕ್ಕೆ ಉಪನಿರೀಕ್ಷಕರಾಗಿ ವರ್ಗಾಯಿಸಲಾಗಿದ್ದು, ಯಾವುದೇ ಭಡ್ತಿ ನೀಡಿಲ್ಲ. ಅಲ್ಲದೆ, ಮುಲ್ಕಿಗೆ ನೂತನ ಎಸ್ಸೈ ಆಗಿ ಉಳ್ಳಾಲದ ವಿನಾಯಕ ತೋರಗಲ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಮುಲ್ಕಿ ಬಿಜೆಪಿಯ ಇನ್ನೊಂದು ಬಣ ಸಂಸದರ ಮುಖಾಂತರ ವರ್ಗಾವಣೆ ತಡೆಯಲು ಯತ್ನಿಸುತ್ತಿರುವ ಮಾತುಗಳೂ ಕೇಳಿ ಬರುತ್ತಿದೆ.

Edited By :
Kshetra Samachara

Kshetra Samachara

08/10/2020 07:01 pm

Cinque Terre

19.91 K

Cinque Terre

0

ಸಂಬಂಧಿತ ಸುದ್ದಿ