ಮುಲ್ಕಿ: ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬೊಂದೇಲ್ ನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕಲಾವಿದರ ಜೊತೆ ಜಿಲ್ಲಾಧಿಕಾರಿಯವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮಂಗಳವಾರ ನಡೆಯಿತು. ಕಲಾವಿದರ ಸಲಹೆ, ಸಹಕಾರದೊಂದಿಗೆ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಲಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂಬಂಧ ಸಂಪೂರ್ಣ ಅಗತ್ಯತೆ ಗಮನದಲ್ಲಿಟ್ಟುಕೊಂಡು ಅಂತಿಮ ಬಜೆಟ್ ತಯಾರಿಸಲು ಶಾಸಕರು ಸೂಚಿಸಿದರು.
ಶಾಸಕರ ಜೊತೆಗೆ ಸ್ಥಳೀಯ ಕಾರ್ಪೊರೇಟರ್ ಲೋಹಿತ್ ಅಮೀನ್, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಮಂಗಳೂರು ರಂಗಭೂಮಿ ಗೌರವಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ರಂಗ ಸಂಗಾತಿ ಸಂಸ್ಥೆ ಅಧ್ಯಕ್ಷ ಶಶಿರಾಜ್ ಕಾವೂರು, ಸಂಕೇತ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಗನ್ ಪವಾರ್, ಸ್ವರೂಪ ಸಮೂಹ ಸಂಸ್ಥೆಯ ಗೋಪಾಡ್ಕರ್, ಹಿರಿಯ ಚಿತ್ರಕಲಾವಿದ ಪ್ರಸಾದ್ ಆರ್ಟ್ಸ್ ಗ್ಯಾಲರಿಯ ಗಣೇಶ ಸೋಮಯಾಜಿ, ಯಕ್ಷಧ್ರುವ ಮಂಗಳೂರು ಅಧ್ಯಕ್ಷ ಪ್ರದೀಪ್ ಆಳ್ವ, ತುಳು ನಾಟಕ ಕಲಾವಿದ ಮೋಹನ್ ಕೊಪ್ಪಳ ಉಪಸ್ಥಿತರಿದ್ದರು.
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶ ರಾಜೇಶ್ ಸ್ವಾಗತಿಸಿ, ವಂದಿಸಿದರು.
Kshetra Samachara
20/10/2020 07:26 pm