ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊರೊನಾ ಹೊಡೆತ, ಡೀಸೆಲ್ ಬೆಲೆ ಏರಿಕೆ; ಮುಷ್ಕರ ಹೂಡಲಿರುವ ಕೊಳವೆ ಬಾವಿ ತೋಡುವ ಯಂತ್ರಗಳು

ಮುಲ್ಕಿ: ಈ ಹಿಂದೆ ಬಾವಿ ತೋಡುತ್ತಿದ್ದ ದಿನಗಳಿದ್ದವು. ಆದರೆ ಇತ್ತೀಚೆಗೆ ಎಷ್ಟು ಆಳಕ್ಕೆ ಹೋದರೂ ಅಂತರ್ಜಲ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ದಿನ, ತಿಂಗಳುಗಟ್ಟಲೆ ಬಾವಿ ತೋಡಿ ನೀರು ಸಿಗದಿದ್ದರೆ ಟೈಮ್, ಶ್ರಮ, ಹಣ ವ್ಯರ್ಥ. ಇದಕ್ಕೆ ಪರ್ಯಯವಾಗಿ ಬೋರ್ ವೆಲ್ (ಕೊಳವೆ ಬಾವಿ) ತೋಡುವಿಕೆ ಪ್ರವರ್ಧಮಾನಕ್ಕೆ ಬಂತು. ರೈತರು ಜಮೀನಿನಲ್ಲಿ ಒಂದೆರಡಾದರೂ ಕೊಳವೆ ಬಾವಿ ತೋಡಿ, ನೀರಿನ ಮೂಲ ಹುಡುಕಿದರು. ಜತೆಗೆ ಸರಕಾರದ ಗಂಗಾ ಕಲ್ಯಾಣ ಸ್ಕೀಮ್ ನೆರವಿಗೆ ಬಂತು. ಆದರೆ ಕೊರೊನಾ ಹೊಡೆತ, ಡೀಸೆಲ್ ಬೆಲೆ ಏರಿಕೆಯಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು 80ಕ್ಕೂ ಅಧಿಕ ಕೊಳವೆಬಾವಿ ತೋಡುವ ಯಂತ್ರಗಳು(ರಿಗ್) ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿವೆ.

ವಾಹನಗಳನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯನ್ನು ಮಾಲೀಕರು ತಲುಪಿದ್ದು, ವಾಹನ ಸ್ಥಗಿತಗೊಳಿಸಲು ಕಾರಣವಾಗಿದೆ.

ಅನಿರ್ದಿಷ್ಟಾವಧಿ ವರೆಗೆ ಯಂತ್ರ ನಿಲ್ಲಿಸಲಾಗುವುದರಿಂದ ಯಾವುದೇ ಕೊಳವೆ ಬಾವಿ ತೋಡುವುದು ಸ್ಥಗಿತಗೊಳ್ಳಲಿದೆ. ಕೊರೊನಾ ಬಳಿಕ ಏರಿದ ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳು ಸಿಗದೆ ಸಮಸ್ಯೆ, ಮುಖ್ಯವಾಗಿ ಉತ್ತರ ಭಾರತದ ಕಾರ್ಮಿಕರನ್ನು ಕರೆ ತರುವುದೇ ಸವಾಲಾಗಿದೆ. ವೇತನ, ಭತ್ಯೆ, ವಸತಿ ಎಂದು ವೆಚ್ಚ ದುಬಾರಿಯಾಗಿದೆ.

ಸರಕಾರಿ ಯೋಜನೆ ಸೇರಿದಂತೆ, ಕೊಳವೆ ಬಾವಿಗಳಿಗೆ ನಾಡಿನಾದ್ಯಂತ ಇದೀಗ ಬೇಡಿಕೆ ಹೆಚ್ಚಿದ್ದರೂ ಕೊಳವೆ ಯಂತ್ರಗಳನ್ನು ಅದೇ ಓಬಿ ರಾಯನ ದರದಲ್ಲಿ ನಡೆಸಲು ಸಾಧ್ಯವಾಗದ ಸ್ಥಿತಿಯಿದೆ. ಹೀಗಾಗಿ ನಷ್ಟ ಮಾಡಿಕೊಳ್ಳುವುದಕ್ಕಿಂತ ನಿಲ್ಲಿಸಿ, ತಮ್ಮ ಸಂಕಷ್ಟ ಸರಿಪಡಿಸಿಕೊಳ್ಳಲು ಮಾಲಿಕರು ಮುಂದಾಗಿದ್ದಾರೆ.

ಕೊಳವೆ ಬಾವಿ ತೋಡಲು ಈಗಿರುವ ದರಕ್ಕಿಂತ ಶೇ. 40ರಷ್ಟು ಹೆಚ್ಚು ಮಾಡಿದರೆ ಮಾತ್ರ ಯಂತ್ರ ಮತ್ತೆ ಪುನಾರಂಭ ಮಾಡಬಹುದು. ನಮ್ಮ ಸಮಸ್ಯೆಗಳಿಗೆ ಜನರು, ರೈತರು ಸ್ಪಂದಿಸುವ ವಿಶ್ವಾಸವಿದೆ ಎಂದು ದ.ಕ., ಉಡುಪಿ ಜಿಲ್ಲಾ ರಿಗ್ ಮಾಲೀಕರ ಸಂಘದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

11/02/2021 08:05 pm

Cinque Terre

6.15 K

Cinque Terre

0

ಸಂಬಂಧಿತ ಸುದ್ದಿ