ಎಡಪದವು: ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಎಡಪದವು ಶ್ರೀ ಹನುಮಾನ್ ಮಂದಿರದಲ್ಲಿ ನಡೆಯುವ ದೇವರ ನೂತನ ಬಿಂಬ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಕುರಿತು ಸಮಾಲೋಚನೆ ಸಭೆ ಎಡಪದವು ಹನುಮಾನ್ ಮಂದಿರದಲ್ಲಿ ನಡೆಯಿತು.
ಈ ಸಂದರ್ಭ ಶಾಸಕ ಡಾ.ವೈ. ಭರತ್ ಶೆಟ್ಟಿ ಮಾತನಾಡಿ, ಬ್ರಹ್ಮಕಲಶೋತ್ಸವದ ಮೂಲಕ ದೇವಳದ ಅಭಿವೃದ್ಧಿಯ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ವಿಜಯ್ ಗೌಡ ಮ್ಯಾನೇಜಿಂಗ್ ಟ್ರಸ್ಟಿ, ದೇವಣ್ಣ ಅಧ್ಯಕ್ಷರು ಶ್ರೀ ರಾಮಾಂಜನೇಯ ಜನತಾ ವ್ಯಾಯಾಮ ಶಾಲೆ, ಸ್ಥಳೀಯ ಭಾಗದ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಪ್ರಮುಖರು, ಕಾರ್ಯಕರ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
24/01/2021 02:27 pm