ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಅಮೆರಿಕದ ಸೆನೆಟ್ ಪ್ರತಿನಿಧಿಯಾಗಿ ಗೆಲುವು ; ಹರಕೆ ಸಲ್ಲಿಸಿದ ರಾಜಾ ಕೃಷ್ಣಮೂರ್ತಿ

ಸುಬ್ರಹ್ಮಣ್ಯ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಸೆನೆಟ್ ಸದಸ್ಯರಾಗಿ ಚುನಾಯಿತರಾದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹರಕೆ ಪೂಜೆ ಒಪ್ಪಿಸಿದ್ದಾರೆ.

ಅಮೆರಿಕದಲ್ಲಿ ವಕೀಲರಾಗಿರುವ ನವದೆಹಲಿಯ ರಾಜಾ ಕೃಷ್ಣಮೂರ್ತಿಯವರು 2016 ರಲ್ಲಿ ಮೊದಲ ಬಾರಿಗೆ ಅಮೆರಿಕ ಸಂಸತ್ ನಲ್ಲಿ ಜನಪ್ರತಿನಿಧಿಯಾದರು.

ಬಳಿಕ ಕಳೆದ ವರ್ಷ ತನ್ನ ತಾಯಿ ವಿಜಯಕೃಷ್ಣ ಮೂರ್ತಿ ಜತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಗಪ್ರತಿಷ್ಠೆ ಹಾಗೂ ಪಂಚಾಮಾಭಿಷೇಕ ಸೇವೆ ಪೂರೈಸಿದರು.

ಈ ಹಿಂದೆ ಸೆನೆಟ್ ಪ್ರತಿನಿಧಿಯ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಬೆಂಗಳೂರಿನ ಜ್ಯೋತಿಷಿ ಅಮೆರಿಕದ ಚಿಕಾಗೋದಲ್ಲಿ ಹಿಂದೂ ದೇವಳವೊಂದರಲ್ಲಿ ಅರ್ಚಕರಾಗಿರುವ ಪುರೋಹಿತ ನಾಗೇಂದ್ರ ರಾವ್ ಅವರ ಸಲಹೆಯಂತೆ ಚುನಾವಣೆ ಸಂದರ್ಭ ಸುಬ್ರಹ್ಮಣ್ಯ ದೇವರಿಗೆ ಹೊತ್ತುಕೊಂಡಿದ್ದ ಹರಕೆ ಈಡೇರಿಸುವ ಸಲುವಾಗಿ ಕ್ಷೇತ್ರಕ್ಕೆ ಬಂದಿರುವುದಾಗಿ ಅವರು ಭೇಟಿ ವೇಳೆ ಹೇಳಿದ್ದಾರೆ.

ಭೇಟಿ ಸಂದರ್ಭ ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶರು ಅವರಿಗೆ ಮಾರ್ಗದರ್ಶನ ನೀಡಿದರು. ಇದೀಗ ಅಮೆರಿಕದ ಸಂಸತ್ ಗೆ ನಡೆದ ಚುನಾವಣೆಯಲ್ಲಿ ರಾಜಾ ಕೃಷ್ಣಮೂರ್ತಿ ವಿಜಯಿಯಾಗಿದ್ದಾರೆ.

ಈ ಗೆಲುವಿನಲ್ಲಿ ದೇವರ ದಯೆಯೂ ಇದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತನಾಗಿರುವ ಅವರು ಪ್ರತಿಕ್ರಿಯಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/11/2020 12:37 pm

Cinque Terre

5.19 K

Cinque Terre

0

ಸಂಬಂಧಿತ ಸುದ್ದಿ