ಮೂಡುಬಿದಿರೆ: ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಸೋಮವಾರ ಜಾಮೀನುರಹಿತ ಪ್ರಕರಣ ದಾಖಲಾಗಿದೆ.
ಪುಣ್ಯ ಪುರುಷರಾದ ಕೋಟಿ- ಚೆನ್ನಯರು, ಬಿಲ್ಲವ ಸಮುದಾಯ ಹಾಗೂ ಹಿರಿಯ ರಾಜಕಾರಣಿ, ಬಿಲ್ಲವ ಮುಖಂಡ ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಜಗದೀಶ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರಾಜು ಪಿ.ಕೆ. ಸಹಿತ ಬಿಲ್ಲವ ಮುಖಂಡರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಜಗದೀಶ್ ಅಧಿಕಾರಿ ವಿರುದ್ಧ ದಂಡ ಸಂಹಿತೆ ಕಲಂ 295(ಎ), 505 ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.
Kshetra Samachara
08/02/2021 08:57 pm