ಈಶ್ವರಪ್ಪ ವಿರುದ್ಧ ಎಫ್ ಐ ಆರ್ ಆಗಿದೆ, ಎಲ್ಲಾ ವಿವರ ಪಡೆದುಕೊಂಡಿದ್ದೇನೆ
ಈ ಬಗ್ಗೆ ಈಶ್ವರಪ್ಪನವರಲ್ಲಿ ಮಾತನಾಡ್ತೇನೆ, ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರೀಯೆ ನೀಡಿದ್ದಾರೆ.
ಫೋನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ .ಅವರನ್ನ ಕರೆಸಿಯೂ ಕೆಲವು ವಿಚಾರ ಮತ್ತೆ ಮಾತನಾಡ್ತೇನೆ,
ರಾಜೀನಾಮೆ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಿಲ್ಲ, ಒನ್ ಟು ಒನ್ ಮಾತನಾಡಿದ್ರೆ ಸ್ಪಷ್ಟವಾಗುತ್ತೆ,ಅಲ್ಲಿನ ಘಟನೆ ಮತ್ತು ಎಫ್ ಐಆರ್ ಆದ ನಂತ್ರ ಏನಾಗಿದೆ ಅಂತ ಅವರ ಜೊತೆ ಚರ್ಚಿಸುತ್ತೇನೆ ಎಂದರು.
ವಿರೋಧ ಪಕ್ಷದವರು ಇದರಲ್ಲಿ ತಪ್ಪು ಕಂಡು ಹುಡುಕೋ ಪ್ರಯತ್ನ ಮಾಡ್ತಿದ್ದಾರೆ. ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತೆ, ತನಿಖೆಯಲ್ಲಿ ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ, ಮತ್ತು ಇದರ ಹಿನ್ನೆಲೆ ಏನು ಅನ್ನೋದು ಗೊತ್ತಾಗುತ್ತೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ, ನಾವು ಹಸ್ತಕ್ಷೇಪ ಮಾಡಲ್ಲ,ವರಿಷ್ಠರಿಗೆ ಎಲ್ಲಾ ವಿಚಾರ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
PublicNext
13/04/2022 10:55 am