ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತ್ಯೇಕ ಮರಳು ನೀತಿ, ಮರಳು ಗಣಿಗಾರಿಕೆಗೆ ಅನುಮತಿ: ಸಿಎಂಗೆ ಅಹವಾಲು

ಬಂಟ್ವಾಳ: ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಮಸ್ಯೆ ಸಂಬಂಧ 'ಪ್ರತ್ಯೇಕ ಮರಳುನೀತಿ' ಶೀಘ್ರ ಅನುಷ್ಠಾನಕ್ಕೆ ತರಬೇಕು ಹಾಗೂ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ದ.ಕ.ಜಿಲ್ಲೆಯ ತುಂಬೆ, ಮಳವೂರು ಡ್ಯಾಂ ಸಹಿತ ಇತರೆಡೆ ಶೇಖರಣೆಯಾಗಿರುವ ಮರಳು ತೆರವಿಗೆ ಜಿಲ್ಲಾಧಿಕಾರಿಯವರಿಗೆ ಪೂರ್ಣ ಅಧಿಕಾರ ನೀಡುವುದಲ್ಲದೆ ನಾನ್ -ಸಿಆರ್ ಝಡ್ ವ್ಯಾಪ್ತಿಯಲ್ಲಿ ರಾಜ್ಯ ಮಿನರಲ್ ನಿಗಮಕ್ಕೆ ಸಲ್ಲಿಸಿರುವ 30 ಪ್ರಸ್ತಾವನೆಯನ್ನು ತಕ್ಷಣ ಟೆಂಡರ್ ಕರೆದು ಅನುಮತಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಚಿವ ಸಿ.ಸಿ.ಪಾಟೀಲ್, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸಂಜೀವ ಮಠಂದೂರು, ಎಸ್.ಅಂಗಾರ, ವೇದವ್ಯಾಸ ಕಾಮತ್, ಹರೀಶ್ ಪೂಂಜ ಹಾಜರಿದ್ದರು.

Edited By : Nirmala Aralikatti
Kshetra Samachara

Kshetra Samachara

12/11/2020 06:25 pm

Cinque Terre

10.29 K

Cinque Terre

2

ಸಂಬಂಧಿತ ಸುದ್ದಿ