ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗ್ರಾಪಂ ಚುನಾವಣೆ; ಮೊಡಂಕಾಪಿನಲ್ಲಿ ಕಂಟ್ರೋಲ್ ರೂಮ್

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ ಚುನಾವಣೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರಗತಿ ವಿವರ ದಾಖಲಿಸಿಕೊಳ್ಳಲು ಮತ್ತು ಪ್ರತಿ ಎರಡು ಗಂಟೆಗೊಮ್ಮೆ ಮತದಾನದ ಪ್ರಗತಿಯ ವಿವರ ಪಡೆಯಲು ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ.

ಇಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಸಿಬ್ಬಂದಿ ಗಣಕಯಂತ್ರ ಮೂಲಕ ದಾಖಲೀಕರಣ ನಡೆಸುತ್ತಿದ್ದು, ಬೆಳಗ್ಗೆ ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಸಿಬ್ಬಂದಿ ಕೇಂದ್ರಕ್ಕೆ ಹಾಜರಾಗಿ ಕರ್ತವ್ಯ ನಿರತರಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

22/12/2020 11:28 am

Cinque Terre

9.96 K

Cinque Terre

0

ಸಂಬಂಧಿತ ಸುದ್ದಿ