ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ತಾಲೂಕಿನಲ್ಲಿ 20 ಅತೀ ಸೂಕ್ಷ್ಮ ಮತಗಟ್ಟೆಗಳು

ಮೂಡುಬಿದಿರೆ: ನಾಳೆ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಮೂಡುಬಿದಿರೆ ತಾಲೂಕಿನಾದ್ಯಂತ 20 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, 5ರಲ್ಲಿ ಸಂಪೂರ್ಣ ವೀಡಿಯೊ ಚಿತ್ರೀಕರಣ ಮಾಡಲಾಗುವುದು.

ಪಡುಮಾರ್ನಾಡಿನ ಪಂಚಾಯಿತಿ ಕಚೇರಿ, ಪಾಡ್ಯಾರು ಶಾಲೆ, ಮೂಡುಮಾರ್ನಾಡು ಪ್ರಾಥಮಿಕ ಶಾಲೆ, ಪಾಲಡ್ಕ ವರ್ಣಬೆಟ್ಟು ಪ್ರಾಥಮಿಕ ಶಾಲೆ, ಕೇಮಾರು ಕಿ. ಪ್ರಾ. ಶಾಲೆ, ಪಾಲಡ್ಕ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಕಡಂದಲೆ ಪ್ರಾಥಮಿಕ ಶಾಲೆ, ಮುಕ್ಕಡಪು ಪ್ರಾಥಮಿಕ ಶಾಲೆ, ತೆಂಕಮಿಜಾರಿನ ಮಿಜಾರು ಪ್ರಾಥಮಿಕ ಶಾಲೆ, ಹೊಸಬೆಟ್ಟಿನ ಸೈಂಟ್ ಸೆಬಾಸ್ಟಿಯನ್ ಶಾಲೆ, ಪುಚ್ಚಮೊಗರಿನ ಶಾಂತಿರಾಜ ಕಾಲೊನಿ, ಹೊಸಬೆಟ್ಟು ಪ್ರಾಥಮಿಕ ಶಾಲೆ, ಇರುವೈಲು ಹಿ.ಪ್ರಾ. ಶಾಲೆ, ವಾಲ್ಪಾಡಿ ಪೆರಿಬೆಟ್ಟು ಶಾಲೆ, ಅಳಿಯೂರು ಮತ್ತು ವಾಲ್ಪಾಡಿ ಪ್ರಾಥಮಿಕ ಶಾಲೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ.

ಮಿಜಾರು, ವರ್ಣಬೆಟ್ಟು, ಇರುವೈಲು, ಪಂಚಾಯತ್ ಪಡುಮಾರ್ನಾಡು, ಅಳಿಯೂರು ಪ್ರಾಥಮಿಕ ಶಾಲೆಗಳಲ್ಲಿ ನಡೆಯುವ ಮತದಾನವನ್ನು ವೀಡಿಯೊ ಚಿತ್ರೀಕರಣ ಮಾಡಲಾಗುತ್ತದೆ.

ಚುನಾವಣೆಯ ಕಾರ್ಯನಿರ್ವಹಣೆಗಾಗಿ ಮೂಡುಬಿದಿರೆ ತಾಲೂಕಿನ 99 ಮತಗಟ್ಟೆಗಳಲ್ಲಿ 499 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಮತ ಎಣಿಕೆ: ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಮಾಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಡಿ. 30 ರಂದು ಮತ ಎಣಿಕೆಯೂ ಮಹಾವೀರ ಕಾಲೇಜಿನಲ್ಲೇ ನಡೆಯಲಿದೆ.

Edited By : Nagaraj Tulugeri
Kshetra Samachara

Kshetra Samachara

21/12/2020 10:57 pm

Cinque Terre

6.87 K

Cinque Terre

0

ಸಂಬಂಧಿತ ಸುದ್ದಿ