ಮುಲ್ಕಿ: ಸೂರಿಂಜೆ ಗ್ರಾಪಂ ವ್ಯಾಪ್ತಿ ಚುನಾವಣೆ ಪ್ರಯುಕ್ತ ಕಾರ್ಯಕರ್ತರ ಸಭೆ ಕುಲ್ಲಂಗಾಲು ಪರಿಸರದಲ್ಲಿ ನಡೆಯಿತು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಲ್ಲ 26 ಗ್ರಾಪಂನಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಬರುವಲ್ಲಿ ಶ್ರಮ ವಹಿಸಬೇಕೆಂದು ಮನವಿ ಮಾಡಿದರು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರ ಕಟೀಲು, ಮೂಡುಬಿದಿರೆ ಮಂಡಲ ಬಿಜೆಪಿ ಅಧ್ಯಕ್ಷ ಸುನಿಲ್ ಆಳ್ವ, ಮೂಡುಬಿದಿರೆ ಕ್ಷೇತ್ರ ಚುನಾವಣಾ ಉಸ್ತುವಾರಿ ಜಯಾನಂದ ಮುಲ್ಕಿ,ಮಂಡಲ ಬಿಜೆಪಿ ಕಾರ್ಯ ದರ್ಶಿ ಕೇಶವ,ಬಿಜೆಪಿ ಮುಖಂಡರಾದ ಜಯಂತ್ ಸಾಲ್ಯಾನ್,ಬೋಜರಾಜ್ ಶೆಟ್ಟಿ ಸೂರಿಂಜೆ, ಮನೋಹರ್ ಶೆಟ್ಟಿ ಸೂರಿಂಜೆ, ಶಶಿಧರ ಶೆಟ್ಟಿ ಸೂರಿಂಜೆ, ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ,ರಾಧಾಕೃಷ್ಣ ಭಂಡಾರ್ಕರ್,ಪುಷ್ಪರಾಜ್ ಶೆಟ್ಟಿ ಮಧ್ಯ, ಗಣೇಶ್ ಅರ್ಬಿ,ದೀಪಕ್ ಕುಲ್ಲಂಗಾಲು,ಗಿರೀಶ್ ಕೋಟೆ, ಸಂಪತ್ ಸೂರಿಂಜೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪರಶುರಾಮ ಶೆಟ್ಟಿ, ವಸಂತಿ ಪೂಜಾರಿ, ನವಾಜ್, ಸರಿತಾ ನಾಯ್ಕ್,ಪದ್ಮಾವತಿ,ದಿನೇಶ್, ದಿವಾಕರ, ಸುಧಾ ಉಪಸ್ಥಿತರಿದ್ದರು.
ಈ ಸಂದರ್ಭ ಜಲೀಲ್ ಎಂಬವರು ಬಿಜೆಪಿಗೆ ಸೇರ್ಪಡೆಗೊಂಡರು.
Kshetra Samachara
16/12/2020 06:55 pm