ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಮಂಗಳೂರು: ಆಡಳಿತ ಮಂಡಳಿ ಸ್ಥಾನಕ್ಕೆ ಚುನಾವಣೆ; ಇಂಟಕ್ ಜಯಭೇರಿ

ಮುಲ್ಕಿ: ಪಣಂಬೂರು ನವಮಂಗಳೂರು ಬಂದರಿನಲ್ಲಿನ ಆಡಳಿತ ಮಂಡಳಿ ಸ್ಥಾನಕ್ಕೆ ಕಾರ್ಮಿಕ ಯೂನಿಯನ್ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಇಂಟಕ್ ನಂಬರ್ ವನ್. ಸ್ಥಾನ ಪಡೆದಿದೆ.

ದ್ವಿತೀಯ ಸ್ಥಾನವನ್ನು ಎಚ್ ಎಂ ಎಸ್ ಪಡೆಯಿತು.

ಎನ್ ಎಂಪಿಟಿಯಲ್ಲಿ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿ ಮೂಡಿ ಬಂದ ಪ್ರಯುಕ್ತ ಶುಕ್ರವಾರ ಇಂಟಕ್ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಇಂಟಕ್ ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ಎಲ್ಲ ಸದಸ್ಯರನ್ನು ಅಭಿನಂದಿಸಿದರು.

ಇಂಟಕ್ ಸದಾ ಕಾರ್ಮಿಕರ ಪರವಾಗಿ ಹೋರಾಟ ಮಾಡಲಿದೆ. ಬಂದರಿನಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಗೆಹರಿಸಿ ಇಂಟಕ್ ಸಂಘಟನೆ ಕರ್ತವ್ಯ ನಿರ್ವಹಿಸಲಿದೆ. ಮುಂದೆಯೂ

ಇಂಟಕ್ ಗೆ ಎರಡೂ ಟ್ರಸ್ಟಿ ಸ್ಥಾನ ಸಿಗುವಂತೆ ಬಲಿಷ್ಠಗೊಳಿಸ ಬೇಕಿದೆ.

ಕಳೆದ ಎರಡು ಅವಧಿಯಲ್ಲಿ ಇಂಟಕ್ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಇಂಟಕ್ ನ ಉತ್ತಮ ಕೆಲಸಕ್ಕೆ ಕಾರ್ಮಿಕ ವರ್ಗ ಬೆಂಬಲಿಸುವ ಮೂಲಕ ಗೌರವ ನೀಡಿದೆ ಎಂದರು.

ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ, ಟ್ರಸ್ಟಿ ಅಬೂಬಕರ್ ಕೃಷ್ಣಾಪುರ, ಯುವ ಇಂಟಕ್ ರಾಜ್ಯ ಕಾರ್ಯದರ್ಶಿ ದಿನಕರ ಶೆಟ್ಟಿ, ಫಾರೂಕ್ ಅವರು ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಶಿವಣ್ಣ ಸ್ವಾಗತಿಸಿದರು. ಭರತ್ ವಂದಿಸಿದರು.

Edited By : Nagaraj Tulugeri
Kshetra Samachara

Kshetra Samachara

11/12/2020 08:44 pm

Cinque Terre

6.55 K

Cinque Terre

0

ಸಂಬಂಧಿತ ಸುದ್ದಿ