ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಗೋ ಪೂಜೆ

ಮುಲ್ಕಿ: ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಗೋಪೂಜೆ ನಡೆಯಿತು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮಾತನಾಡಿ, ಗೋವು ದೇವರ ಸಮಾನವಾಗಿದ್ದು, ಅವುಗಳ ರಕ್ಷಣೆ ಹಾಗೂ ಸಂತತಿ ಉಳಿಸುವಿಕೆ ಮಾನವರ ಆದ್ಯ ಕರ್ತವ್ಯ ಎಂದರು.

ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ದೇವಸ್ಥಾನದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಪ್ರಮುಖರಾದ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಕೇಶವ ಮೆನ್ನಬೆಟ್ಟು, ಅಭಿಲಾಶ್ ಶೆಟ್ಟಿ, ಗುರುರಾಜ್ ಕಟೀಲ್, ಕಿರಣ್ ರೈ, ನವನೀತ್ ಶೆಟ್ಟಿ, ರಾಮ ಅಮೀನ್, ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

10/12/2020 09:28 pm

Cinque Terre

9.68 K

Cinque Terre

1

ಸಂಬಂಧಿತ ಸುದ್ದಿ