ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ತಾಲೂಕಿನ 13, ಮಂಗಳೂರಿನ 4 ಸೇರಿ ಒಟ್ಟು 17 ಮತದಾನ ಕೇಂದ್ರ ಶಿಫ್ಟ್

ಬಂಟ್ವಾಳ: ಬಂಟ್ವಾಳ ತಾಲೂಕಿನ 13 ಮತ್ತು ಮಂಗಳೂರು ತಾಲೂಕಿನ 4 ಮತದಾನ ಕೇಂದ್ರ ಸೇರಿ ಒಟ್ಟು 17 ಮತದಾನ ಕೇಂದ್ರಗಳನ್ನು ಸ್ಥಳಾಂತರ ಮಾಡಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ.

ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿದಾಗ, ಮತಗಟ್ಟೆ ಕೇಂದ್ರ ಶಿಥಿಲಗೊಂಡಿರುವುದು, ಮತದಾರರಿಗೆ ದೂರವಾದ ಜಾಗ ಹಾಗೂ ಕೆಲ ಖಾಸಗಿ ಶಾಲಾ ಕಟ್ಟಡಗಳ ರಿಪೇರಿ ಇರುವ ಕಾರಣ, ಮತದಾನಕ್ಕೆ ಯೋಗ್ಯವಲ್ಲದ ಕಾರಣ ಬದಲಾವಣೆ ಮಾಡುವುದು ಸೂಕ್ತವೆಂದು ಹೊಸ ಮತದಾನ ಕೇಂದ್ರಗಳಿಗೆ ಸ್ಥಳಾಂತರಿಸಲು ಅನುಮೋದನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಕೋರಿಕೊಂಡ ಹಿನ್ನೆಲೆಯಲ್ಲಿ ಆಯೋಗ ಈ ಸೂಚನೆ ಹೊರಡಿಸಿದೆ.

ಬಂಟ್ವಾಳ ತಾಲೂಕು: ಬದಲಾದ ಮತಗಟ್ಟೆ ಸಂಖ್ಯೆ ಮತ್ತು ಕೇಂದ್ರಗಳು ಹೀಗಿವೆ. 142 ಸಜಿಪಪಡು ತಲೆಮೊಗರು ನಲಿಕಲಿ ಕಟ್ಟಡ, 146 ಫಜೀರು ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ, 184 ಮಾಣಿ ದ.ಕ. ಜಿಪಂ ಶಾಲೆ ಹೊಸ ಕಟ್ಟಡ, 185 ಮಾಣಿ ದ.ಕ.ಜಿಪಂ ಮಾದರಿ ಹಿ.ಪ್ರಾ.ಶಾಲೆ ಉತ್ತರ ಭಾಗ, 193 ಅನಂತಾಡಿ ಬಾಬನಕಟ್ಟೆ ದ.ಕ.ಜಿಪಂ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಕೊಠಡಿ ಸಂಖ್ಯೆ 1, 193ಎ, ಅದೇ ಶಾಲೆಯ ಪೂರ್ವಭಾಗ, 159 ನರಿಂಗಾನ ಕಲ್ಮಿಂಜ ಹಿ.ಪ್ರಾ.ಶಾಲೆ, 161 ತೌಡುಗೋಳಿ ಅಂಗನವಾಡಿ ಕೇಂದ್ರ, 162 ನರಿಂಗಾನ ಗ್ರಾಪಂ ಹಳೇ ಕಟ್ಟಡ, 204 ಸುವರ್ಣ ಕರ್ನಾಟಕ ದ.ಕ.ಜಿಪಂ ಹಿರಿಯ ಪ್ರಾ.ಶಾಲೆ ಉತ್ತರ ಭಾಗ ಇಡ್ಕಿದು ಗ್ರಾಮ, 209, ಇಡ್ಕಿದು ಗ್ರಾಪಂ ಸಮುದಾಯ ಭವನ, 252 ಸತ್ಯಸಾಯಿ ಲೋಕಸೇವಾ ಪಪೂ ಕಾಲೇಜು ಅಳಿಕೆಯ ಹೊಸ ಕಟ್ಟಡ, 253 ಸತ್ಯಸಾಯಿ ಪಪೂ ಕಾಲೇಜು ಹೊಸ ಕಟ್ಟಡದ ಪೂರ್ವಭಾಗ.

ಮಂಗಳೂರು ತಾಲೂಕು: ಮಂಗಳೂರು ತಾಲೂಕಿನ ಮತಗಟ್ಟೆ ಸಂಖ್ಯೆ 143ನ್ನು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ನೆರವಿನ ಪಾಲಿಟೆಕ್ನಿಕ್ ಉತ್ತರ ಭಾಗ, 143 ಎ ಅದೇ ಪಾಲಿಟೆಕ್ನಿಕ್ ನ ಪಶ್ಚಿಮ ಭಾಗ, 173 ನವಚೇತನ ಇಂಗ್ಲಿಷ್ ಮೀಡಿಯಂ ಶಾಲೆ ಪೂರ್ವಭಾಗ, ಹಾಗೂ 174 ನವಚೇತನಾ ಇಂಗ್ಲಿಷ್ ಮಾಧ್ಯಮ ಶಾಲೆಯ ಪೂರ್ವಕಟ್ಟಡದ ದ.ವಿಂಗ್ ರೂಂ ಆಗಿ ಬದಲಾವಣೆ ಹೊಂದಿರುತ್ತದೆ.

Edited By : Vijay Kumar
Kshetra Samachara

Kshetra Samachara

07/12/2020 09:43 am

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ