ಮಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಂಗಳೂರಿಗರು ಸ್ಪಂದಿಸಿಲ್ಲ.
ದಕ್ಷಿಣ ಜಿಲ್ಲಾದ್ಯಾಂತ ಎಂದಿನಂತೆ ಬಸ್ ಸಂಚಾರ, ಆಟೊ ರಿಕ್ಷಾ ಸಂಚಾರ ನಡೆಯುತ್ತಿದೆ.ಅಂಗಡಿ ಮುಂಗಟ್ಟು ಎಂದಿನಂತೆಯೇ ವ್ಯಾಪಾರ ವೈವಾಟುಗಳಲ್ಲಿ ತೊಡಗಿಕೊಂಡಿವೆ.
ರಾಜ್ಯದ ಹಲವೆಡೆ ವಿವಿಧ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲವಾಗಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬೆಂಬಲ ಸೂಚಿಸಿದ್ದವು. ಆದರೆ, ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿರಲಿಲ್ಲ.
Kshetra Samachara
05/12/2020 11:30 am