ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಿಜೆಪಿ ಪ್ರಶಿಕ್ಷಣ ವರ್ಗ ಸಮಾರೋಪ; ಕ್ರಿಯಾಶೀಲರಾಗಲು ಕಾರ್ಯಕರ್ತರಿಗೆ ಕರೆ

ಬಂಟ್ವಾಳ: ಬಂಟ್ವಾಳ ಬಿಜೆಪಿ ಮಂಡಲದ ಪ್ರಶಿಕ್ಷಣ ಪ್ರಕೋಷ್ಠ ವತಿಯಿಂದ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ವಿದ್ಯಾಲಯ ಸಭಾಭವನದಲ್ಲಿ ಎರಡು ದಿನಗಳ ವರೆಗೆ ನಡೆದ ಬಂಟ್ವಾಳ ಮಂಡಲ ಪ್ರಶಿಕ್ಷಣ ವರ್ಗ ಸಮಾರೋಪ ಸೋಮವಾರ ನಡೆಯಿತು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸಮಾರೋಪ ಭಾಷಣ ಮಾಡಿ, ಕ್ರಿಯಾಶೀಲ ಕಾರ್ಯಕರ್ತರಿಂದ ಪಕ್ಷದ ಬೆಳವಣಿಗೆ ಸಾಧ್ಯ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪ್ರಶಿಕ್ಷಣ ಸಂಚಾಲಕ ನಾರಾಯಣ ಭಂಡಾರಿ, ರಾಜ್ಯ ಪ್ರಕೋಷ್ಠ ಸಮಿತಿ ಸದಸ್ಯೆ ಡಾ.ಮಂಜುಳಾ ರಾವ್ ವೇದಿಕೆಯಲ್ಲಿದ್ದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಶಿಕ್ಷಣದ ಸಹ ಸಂಚಾಲಕ ವೇದಾನಂದ ಕಾರಂತ್ ಉಪಸ್ಥಿತರಿದ್ದರು.

ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ವಂದಿಸಿದರು.

ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

01/12/2020 02:14 pm

Cinque Terre

3.23 K

Cinque Terre

0

ಸಂಬಂಧಿತ ಸುದ್ದಿ