ಮುಲ್ಕಿ: ಅಡ್ಯಾರ್ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಡ್ಯಾರ್ ಪದವಿಗೆ ಶಾಸಕ ಡಾ.ವೈ. ಭರತ್ ಶೆಟ್ಟಿ ಭೇಟಿ ನೀಡಿ ಊರಿನ ನಾಗರಿಕರ ಅಹವಾಲು ಸ್ವೀಕರಿಸಿದರು.
ಈ ಸಂದರ್ಭ ಶಾಸಕರು, ಸಂಸದ ನಳಿನ್ ಕುಮಾರ್ ಕಟೀಲ್ ಅವರ 4 ಲಕ್ಷ ರೂ. ಅನುದಾನದಲ್ಲಿ ಅಡ್ಯಾರ್ ಪದವು 18ನೇ ಅಡ್ಡ ರಸ್ತೆಯಲ್ಲಿ ನಡೆದಿರುವ ತಡೆಗೋಡೆ ಹಾಗೂ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ, ರಾಜ್ಯ ಸರಕಾರದ ಮಳೆ ಹಾನಿ ಕಾಮಗಾರಿಯ 14 ಲಕ್ಷ ಅನುದಾನದಲ್ಲಿ ಅಶೋಕ್ ಆಚಾರ್ಯ ಅವರ ಮನೆಯಿಂದ ರೊನಾಲ್ಡ್‌ರವರ ಮನೆಯವರೆಗೆ ನಡೆಯಲಿರುವ ರಸ್ತೆ ಕಾಂಕ್ರೀಟಿಕರಣದ ಗುದ್ದಲಿ ಪೂಜೆ, ಶಾಸಕರ ಅನುದಾನದಲ್ಲಿ ಅಡ್ಯಾರ್ ಪದವು 9ನೇ ಅಡ್ಡ ರಸ್ತೆಗೆ ನಡೆಯಲಿರುವ ರಸ್ತೆ ಕಾಂಕ್ರೀಟಿಕರಣದ ಗುದ್ದಲಿ ಪೂಜೆ, MRPL ಹಾಗೂ ಅಡ್ಯಾರ್ ಗ್ರಾಪಂನ 5 ಲಕ್ಷ ಅನುದಾನದಲ್ಲಿ ನಡೆದಿರುವ ಅಂಗನವಾಡಿ ಕೇಂದ್ರ ಉದ್ಘಾಟನೆ, ಅಡ್ಯಾರ್ ಪಂಚಾಯತ್‌ನ 2020-2021ನೇ ಸಾಲಿನ ಅನುದಾನದಲ್ಲಿ ಅಡ್ಯಾರ್ ಪದವು ಜಂಕ್ಷನ್‌ನಲ್ಲಿ ನಡೆದಿರುವ ಅಡ್ಯಾರ್ ಪದವು ಬಸ್ ತಂಗುದಾಣ ಉದ್ಘಾಟಿಸಿದರು.
ಶಾಸಕರು, ಸ್ಥಳೀಯರೊಬ್ಬರ ಬೈಕ್ ತಾನೇ ಚಲಾಯಿಸಿ ಸಂಚರಿಸುವ ಮೂಲಕ ಊರಿನವರ ಗಮನ ಸೆಳೆದರು. ಬಿಜೆಪಿ ಮಂಗಳೂರು ನಗರ ಉತ್ತರ ಉಪಾಧ್ಯಕ್ಷ ಹಾಗೂ ನೀರುಮಾರ್ಗ ಮಹಾ ಶಕ್ತಿ ಕೇಂದ್ರ ಪ್ರಭಾರಿಗಳಾದ ಲಕ್ಷ್ಮಣ್ ಶೆಟ್ಟಿಗಾರ್, ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, BJP ಜಿಲ್ಲಾ ಕಾರ್ಯಕಾರಿ ಸದಸ್ಯ ಸಂತೋಷ್ ತುಪ್ಪೆಕಲ್ಲು, ಮಂಡಲ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಮಹಾಬಲ ಅಡ್ಯಾರ್, ಕಾರ್ಯದರ್ಶಿ ಕೃಷ್ಣ ಸಾಲಿಯಾನ್, ಉತ್ತರ ಮಂಡಲದ ಎಸ್.ಸಿ. ಮೋರ್ಚಾ ಉಪಾಧ್ಯಕ್ಷರಾದ ಪ್ರತಿಮಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/11/2020 09:13 am