ಮುಲ್ಕಿ: ಮಂಗಳೂರು ಹೊರವಲಯದ ಬೈಕಂಪಾಡಿ ಯಾರ್ಡ್ ಸೂಕ್ತ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಹಣ್ಣು ಹಂಪಲು ಕೋಲ್ಡ್ ಸ್ಟೋರೆಜ್ ಅಗತ್ಯವಿದೆ ಜೊತೆಗೆ ಎಪಿಎಂಸಿ ಯಾರ್ಡ್ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದು, ಸಚಿವರು ಅನುಮೋದನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಸಚಿವರು ಭಾನುವಾರ ಬೈಕಂಪಾಡಿ ಎಪಿಎಂಸಿ ಯಾರ್ಡ್ ಗೆ ಭೇಟಿ ನೀಡಿ ಶಾಸಕರು ಮತ್ತು ಸಮಿತಿ ಪದಾಧಿಕಾರಿಗಳ ಸಭೆ ನಡೆಸಿದರು. ಸಚಿವರ ಜೊತೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್,ಕಾರ್ಪೊರೇಟರ್ ಗಳಾದ ವರುಣ್ ಚೌಟ, ಮನೋಹರ್ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಎಪಿಎಂಸಿ ಅಧ್ಯಕ್ಷ ಕೃಷ್ಣ ರಾಜ್ ಹೆಗ್ಡೆ, ಉಪಾಧ್ಯಕ್ಷರಾದ ರಜನಿ ದುಗ್ಗಣ್ಣ,ವರ್ತಕರ ಸಂಘದ ಅಧ್ಯಕ್ಷರ ಭರತರಾಜ್ ಕೃಷ್ಣಾಪುರ, ಎಪಿಎಂಸಿ ಸದಸ್ಯರು, ವರ್ತಕರ ಸಂಘದ ಪದಾಧಿಕಾರಿಗಳು ಇದ್ದರು.
Kshetra Samachara
16/11/2020 09:07 am