ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಭಾನುವಾರ ನರಿಕೊಂಬು ಗ್ರಾಮದ ನಾಟಿ ಸಜಂಕಪಲಿಕೆಯ ಯೋಧ ನಾಗೇಶ ಮನೆಯಲ್ಲಿ ದೀಪಾವಳಿ ಆಚರಿಸಲಾಯಿತು.
ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಶುಭ ಹಾರೈಸಿ ಕರ್ತವ್ಯದಲ್ಲಿದ್ದ ಯೋಧ ನಾಗೇಶ್ ಅವರೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡಿ, ದೀಪಾವಳಿ ಶುಭಾಶಯ ತಿಳಿಸಿದರು. ಬಳಿಕ ಮನೆಯವರೊಂದಿಗೆ ಮಾತನಾಡಿ ದೇಶ ಸೇವೆ ಗೈಯ್ಯುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಮ್ಮೆಲ್ಲರಿಗೆ ನೀಡಿದ ಪ್ರೇರಣೆಯ ಈ ಕಾರ್ಯಕ್ರಮ ಸಂತೋಷ ತಂದಿದೆ ಎಂದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಕಾರ್ಯದರ್ಶಿಗಳಾದ ರಮನಾಥ ರಾಯಿ, ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ, ಸುರೇಶ್ ಕೋಟ್ಯಾನ್, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
15/11/2020 08:43 pm