ಮುಲ್ಕಿ: ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಗಾಂಧೀಜಿಯವರ ರಾಮ ರಾಜ್ಯದ ಕನಸಿಗೆ ಶಕ್ತಿ ನೀಡಿದವರು.
ಅಖಂಡ ಭಾರತದ ಅಭಿವೃದ್ಧಿಗೆ ಅಂದಿನ ದಿನದಲ್ಲಿಯೇ ರೂಪುರೇಷೆ ಹಾಕಿದ ಪರಿಣಾಮವಾಗಿ ದೇಶ ಇಂದು ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು.
ನೆಹರು ಅವರ ಆದರ್ಶ ನಾವು ಪಾಲಿಸೋಣ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಹೇಳಿದರು.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಜವಾಹರ ಲಾಲ್ ನೆಹರು ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆ.ಪಿ.ಸಿ.ಸಿ. ಕೋಆರ್ಡಿನೇಟರ್ ಎಚ್. ವಸಂತ ಬೆರ್ನಾರ್ಡ್ ಅವರು ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕೋಶಾಧಿಕಾರಿ ನಂದಾ ಪಾಯಸ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕಾರ್ನಾಡ್, ಡಿಸಿಸಿ ಸದಸ್ಯ ಹರಿಯಪ್ಪ ಚೇಳಾಯರು, ನ.ಪಂ. ಸದಸ್ಯರಾದ ಮಂಜುನಾಥ ಕಂಬಾರ, ಬಾಲಚಂದ್ರ ಕಾಮತ್, ಯೋಗೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/11/2020 02:28 pm