ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಬಿಜೆಪಿ ಜನಪರ ಕೆಲಸ ಮಾಡುತ್ತಿಲ್ಲ; ಐವನ್ ವಾಗ್ದಾಳಿ

ಸುಳ್ಯ: ಬಡವರಿಗೆ ನೀಡುತ್ತಿದ್ದ ಅಕ್ಕಿಯನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸಿದ್ದು ಇದೇ ಬಿಜೆಪಿ ಸರಕಾರ. ಇದನ್ನು ಹಿರಿಯ ಶಾಸಕರಾಗಿರುವ ಅಂಗಾರರು ಸದನದಲ್ಲಿ ಪ್ರಶ್ನಿಸಬೇಕು, ಬಡವರ ಪರ ಅವರು ನಿಲ್ಲಬೇಕು ” ಎಂದು ಕೆ.ಪಿ.ಸಿ.ಸಿ. ವಕ್ತಾರ ಐವನ್ ಡಿಸೋಜ ತಿಳಿಸಿದ್ದಾರೆ.

ಸುಳ್ಯಕ್ಕೆ ಆಗಮಿಸಿದ ಐವನ್ ಅರಂಬೂರಿನಲ್ಲಿ ಎಸ್. ಸಂಶುದ್ದೀನ್ ರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಬಿಜೆಪಿ ಸರಕಾರ ಬಂದ ಬಳಿಕ ಒಂದು ಒಳ್ಳೆಯ ಯೋಜನೆ ತಂದಿದ್ದರೆ ಹೇಳಲಿ. ಅವರಿಗೆ ನಮ್ಮ ಸೆಲ್ಯೂಟ್ ಕೊಡುತ್ತೇವೆ.

ಆದರೆ, ಅವರು ನಮ್ಮ ಸರಕಾರ ಬಡವರು ಹೊಟ್ಟೆ ತುಂಬಾ ಊಟ ಮಾಡಲೆಂದು ತಂದಿರುವ ಅಕ್ಕಿ ನೀಡುವ ಯೋಜನೆಯನ್ನು ಈಗ ಕಡಿತ ಮಾಡಿದ್ದಾರೆ.

ಒಂದೇ ಒಂದು ವಸತಿಯನ್ನು ರಾಜ್ಯದಲ್ಲಿ ನೀಡಿಲ್ಲ. ಇಂದಿರಾ ಕ್ಯಾಂಟಿನ್ ಯೋಜನೆ ನಿಲ್ಲಿಸಲು ಯೋಚಿಸುತ್ತಿದ್ದಾರೆ. ವಿದ್ಯುತ್ ಖಾಸಗೀಕರಣ, ಕೃಷಿ ಮಸೂದೆ ತಂದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

2 ಸಾವಿರಕ್ಕೆ ಪ್ರತಿ ಮನೆಗೂ ಮರಳು ನೀಡುವುದಾಗಿ ಸಂಸದ ನಳಿನ್ ಕುಮಾರ್ ‌ಕಟೀಲ್ ಹೇಳಿದ್ದರು. ಅದು ಈಗ ಎಲ್ಲಿದೆ, ಯಾರಿಗೆ ಹೋಗಿದೆ ? ಎಂದು ಪ್ರಶ್ನಿಸಿದ ಅವರು, ಗ್ಯಾಸ್ ಸಬ್ಸಿಡಿಯನ್ನೂ ಈಗಾಗಲೇ ನಿಲ್ಲಿಸಲಾಗಿದೆ.

ಪಾಪದವರಿಗೆ ಪೆನ್ಶನ್ ಕೂಡ ಈ ಸರಕಾರ ನೀಡುತ್ತಿಲ್ಲ. ಬಿಜೆಪಿ ಜನಪರ ಕೆಲಸ ಮಾಡುತ್ತಿಲ್ಲ ಎಂದರು.ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

13/11/2020 11:04 am

Cinque Terre

3.78 K

Cinque Terre

3

ಸಂಬಂಧಿತ ಸುದ್ದಿ