ಮುಲ್ಕಿ: ಅತಿಕಾರಿಬೆಟ್ಟು ಗ್ರಾ. ಪಂ.ನಲ್ಲಿ 2019-20 ನೇ ಸಾಲಿನ ಜಮಾಬಂದಿ ಗ್ರಾಪಂ ಸಭಾಭವನದಲ್ಲಿ ನಡೆಯಿತು. ಸಭೆಯ ನೋಡಲ್ ಅಧಿಕಾರಿಯಾಗಿ ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಲ್ಲೆಸ್ವಾಮಿ ಉಪಸ್ಥಿತರಿದ್ದರು.
ಅತಿಕಾರಿಬೆಟ್ಟು ಪಿಡಿಒ ರವಿ ಜಮಾಬಂದಿ ಬಗ್ಗೆ ಮಾತನಾಡಿ, ಜಮಾಬಂದಿ ವಾರ್ಷಿಕವಾಗಿ ನಡೆಯುವ ಲೆಕ್ಕಪರಿಶೋಧನೆ ಕ್ಕಿಂತ ವಿಭಿನ್ನವಾಗಿದ್ದು, ಗ್ರಾ. ಪಂ.ನಲ್ಲಿ ಪಾರದರ್ಶಕವಾಗಿ ಕೆಲಸ ಮಾಡಲು ಮತ್ತು ದಾಖಲೆ ನಿರ್ವಹಿಸಲು ಸಹಕಾರಿ ಮತ್ತು ಸಾರ್ವಜನಿಕರಿಗೆ ತಮ್ಮ ಗ್ರಾಪಂ ನಿರ್ವಹಿಸಿದ ಕಾಮಗಾರಿ ಮತ್ತು ದಾಖಲೆಗಳ ಪರಿಶೀಲನೆಗೆ ಅವಕಾಶ ಮಾಡಿಕೊಡುತ್ತದೆ.
ಆ ಮೂಲಕ ಅಧಿಕಾರಿಗಳು ಸದಾ ಜಾಗರೂಕರಾಗಿ ಕೆಲಸ ನಿರ್ವಹಿಸುವಂತೆ ಪ್ರೇರೇಪಿಸುತ್ತದೆ ಎಂದರು.
ಗ್ರಾಪಂ ಲೆಕ್ಕ ಸಹಾಯಕ ಯೋಗೀಶ್ ಜಮಾಬಂದಿ ವರದಿ ಮಂಡಿಸಿದರು.
ಅತಿಕಾರಿಬೆಟ್ಟು ಮತ್ತು ಶಿಮಂತೂರು ಗ್ರಾಮ ಕರಣಿಕ ಸುನಿಲ್, ಗ್ರಾಪಂ ನಿಕಟಪೂರ್ವ ಸದಸ್ಯ ಹರೀಶ್ ಶೆಟ್ಟಿ, ನಾಗಿಣಿ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಜಮಾಬಂದಿ ಯಲ್ಲಿ ಭಾಗವಹಿಸಿದ್ದರು.
ನಂತರ ಮಾರ್ಗದರ್ಶಿ ಅಧಿಕಾರಿಗಳು ಮೈಲೊಟ್ಟು ಸ.ಕಿ.ಪ್ರಾ. ಶಾಲೆಯ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿ ಮತ್ತು ಸಂಜೀವಿನಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು.
Kshetra Samachara
08/11/2020 03:33 pm