ಮಂಗಳೂರು: ಇಲ್ಲಿಗೆ ಹೊರ ವಲಯದ ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಪೇಟೆಯಲ್ಲಿ ತನ್ನ ಶಾಸಕತ್ವದ ನಿಧಿಯ ಎರಡು ಲಕ್ಷ ರೂ. ಅನುದಾನದಲ್ಲಿ ಹೊಸದಾಗಿ ನಿರ್ಮಿಸಲಾದ ರಿಕ್ಷಾ ತಂಗುದಾಣ ಮತ್ತು ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಾರ್ಮಿಕ ವರ್ಗಕ್ಕೆ ಉತ್ತಮ ಸೌಲಭ್ಯ ನೀಡುವುದು ಸರಕಾರದ ಆದ್ಯತೆಯಾಗಿದೆ. ರಿಕ್ಷಾ, ಟ್ಯಾಕ್ಸಿ ಚಾಲಕರು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಉತ್ತಮ ಸೇವೆ ಒದಗಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಮಾಜಿ ಶಾಸಕ ಮೊಯ್ದಿನ್ ಬಾವ, ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯರಾದ ಸಚಿನ್ ಅಡಪ, ಸುನಿಲ್ ಜಿ., ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಝೈನುದ್ದೀನ್, ಹಸನ್ ಬಾವ, ಗುತ್ತಿಗೆದಾರ ಮಹಮ್ಮದ್ ಸಲೀಂ , ಎ.ಕೆ.ಮುಹಮ್ಮದ್, ಅಹ್ಮದ್ ಬಾವ, ರುಕಿಯಾ, ಪುರುಷೋತ್ತಮ ಮಲ್ಲಿ, ಹರೀಶ್ ಭಂಡಾರಿ, ಅಡ್ಡೂರು ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಜಲೀಲ್ ಉಪಸ್ಥಿತರಿದ್ದರು.
Kshetra Samachara
07/10/2020 12:25 am