ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗೆಲುವಿನ ಸಂಭ್ರಮದಲ್ಲಿ ಮರಳುತ್ತಿದ್ದ ವೇಳೆ ನೆಟ್ಲದಲ್ಲಿ ಅಪಘಾತ; ಓರ್ವ ಸಾವು

ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ನೆಟ್ಲ ಎಂಬಲ್ಲಿ ಬುಧವಾರ ಸಂಜೆ ವಾಹನದಲ್ಲಿ ಗೆಲುವಿನ ಸಂಭ್ರಮದೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ನೆಟ್ಲದ ಮುಂಡಾಜೆ ಎಂಬಲ್ಲಿ ಅಪಘಾತ ನಡೆದಿದೆ.

ಜೀಪಿನಲ್ಲಿ ಮತ ಎಣಿಕೆ ಕೇಂದ್ರದಿಂದ ಅಭ್ಯರ್ಥಿಗಳನ್ನು ಕರೆದುಕೊಂಡು ಮರಳಿ ಮನೆಗೆ ಆಗಮಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿದೆ. ಈ ಸಂದರ್ಭ ವಾಹನದಲ್ಲಿದ್ದ ನೆಟ್ಲ ಸಮೀಪ ನಿವಾಸಿ ನರೇಶ್ (30) ಎಂಬವರು ವಾಹನದಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮತ್ತೋರ್ವ ಜಗನ್ನಾಥ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿಜೇತ ಅಭ್ಯರ್ಥಿಯೂ ಆಗಿರುವ ದೀಪಕ್, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಅವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

30/12/2020 07:40 pm

Cinque Terre

24.63 K

Cinque Terre

0

ಸಂಬಂಧಿತ ಸುದ್ದಿ