ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ ಗ್ರಾಪಂ ಚುನಾವಣೆಗೆ ಎಸ್ ಡಿ ಪಿಐ ಅಭ್ಯರ್ಥಿಗಳ ಘೋಷಣೆ

ಮುಲ್ಕಿ: ಮುಲ್ಕಿ- ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೆಯಂಗಡಿ ಗ್ರಾಪಂ ಚುನಾವಣೆಯಲ್ಲಿ ಮುಂದಿನ ಅವಧಿಗೆ ಎಸ್ ಡಿ ಪಿಐ ಬೆಂಬಲಿತ ಅಭ್ಯರ್ಥಿಗಳ ಘೋಷಣೆ ಕಾರ್ಯಕ್ರಮ ಹಳೆಯಂಗಡಿ ಬೊಳ್ಳೂರಿನಲ್ಲಿ ಎಸ್ ಡಿ ಪಿಐ ಮುಲ್ಕಿ- ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಅಧ್ಯಕ್ಷತೆಯಲ್ಲಿ ನಡೆಯಿತು.

ಹಳೆಯಂಗಡಿ ಗ್ರಾಪಂ ಚುನಾವಣೆಯಲ್ಲಿ ಎಸ್ ಡಿ ಪಿಐ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದ್ದು, ಇಂದು ಪ್ರಥಮ ಹಂತದ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಆಸಿಫ್ ಕೋಟೆಬಾಗಿಲು ತಿಳಿಸಿದರು.

ಎಸ್ ಡಿ ಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ದಿಕ್ಸೂಚಿಯಾಗಿ ಮಾತನಾಡಿದರು. ಎಸ್ ಡಿ ಪಿಐ ಮುಲ್ಕಿ- ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಿಸಾರ್ ಮರವೂರು, ಪಿಫ್ಐ ಜಿಲ್ಲಾಧ್ಯಕ್ಷ ಮೊಯ್ದಿನ್ ಹಳೆಯಂಗಡಿ, ಎಸ್ ಡಿ ಪಿಐ ಇಂದಿರಾನಗರ ವಾರ್ಡ್ ಅಧ್ಯಕ್ಷ ರಿಯಾಝ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

02/11/2020 12:06 pm

Cinque Terre

6.56 K

Cinque Terre

0

ಸಂಬಂಧಿತ ಸುದ್ದಿ