ಮುಲ್ಕಿ: ಕಾಯ ಅಳಿದರೂ ಕಾಯಕ ಅಳಿಯದು. ಅವರ ಕಾಯಕ ಅಮರ - ಅಜರಾಮರ. ಈ ನಿಟ್ಟಿನಲ್ಲಿ ಕುಡುಂಬೂರು ಹತ್ತು ಸಮಸ್ತರು, ಹಿಂದೂ ಯುವ ಸೇನೆ, ಕುಡುಂಬೂರು ಹಿತರಕ್ಷಣಾ ವೇದಿಕೆ, ಕ್ರೈಸ್ತ ಬಾಂಧವರು ಮತ್ತು ಸ್ಥಳೀಯ ಮುಖಂಡರ ಸಹಾಯದಿಂದ ಜಾತಿಭೇದ ಮರೆತು ಕುಡುಂಬೂರು ಕಾಲೊನಿ ರಸ್ತೆಗಳಿಗೆ ಕುಡುಂಬೂರು ಭೋಜ ಶೆಟ್ಟಿ ಅವರ ಸ್ಮರಣಾರ್ಥ "ನಲ್ಯಗುತ್ತು ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟಿ " ಎಂದು ನಾಮಕರಣ ಮಾಡಿರುವುದು ಸ್ತುತ್ಯಾರ್ಹ, ಅಭಿನಂದನೀಯ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಶನಿವಾರ ಕುಡುಂಬೂರು ರಸ್ತೆಗೆ "ನಲ್ಯಗುತ್ತು ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟಿ ರಸ್ತೆ" ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ಉಪಮೇಯರ್ ವೇದಾವತಿ, ಮನಪಾ ಸದಸ್ಯೆ ವೇದಾವತಿ,ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಬಾಲಕೃಷ್ಣ ಶೆಟ್ಟಿ,ಕಾಮೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಸುರೇಶ್ ಹೊಳ್ಳ, ಜನಾರ್ದನ ದೇವಾಡಿಗ, ಪುಷ್ಪರಾಜ್, ಕರುಣಾಕರ ,ಆಶ್ವಿನ್, ದಿವಾಕರ್ ಶೆಟ್ಟಿ, ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.
Kshetra Samachara
01/11/2020 01:25 pm