ಬಂಟ್ವಾಳ: ನೆಮ್ಮದಿಯ ಬದುಕಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಬೋಳಂತೂರು ಗ್ರಾಮದ ಬಿ ಆರ್ ನಗರದ ಮಹಮ್ಮಾಯಿ ಕ್ಷೇತ್ರದ ವಠಾರದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕುಟುಂಬ ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. jಕಾರ್ಯಕ್ರಮವನ್ನು ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಉದ್ಘಾಟಿಸಿದರು .
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಜಿಲ್ಲಾ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಹಿಂದುಳಿದ ಮೋರ್ಚಾದ ಕಾರ್ಯದರ್ಶಿ ಉದಯಕುಮಾರ್ ನಗ್ರಿ, ಉಪಸ್ಥಿತರಿದ್ದರು. ಗಾಯತ್ರಿ ಕೆ ಪ್ರಾರ್ಥಿಸಿದರು. ಬೋಳಂತೂರು ಗ್ರಾಮದ ಸಹ-ಪ್ರಭಾರಿ ಜಯರಾಮ ರೈ ಸ್ವಾಗತಿಸಿದರು. ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಶೋಭಾ ಶಿವಪ್ಪ ವಂದಿಸಿದರು. ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
20/10/2020 07:59 pm