ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಸಂತೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಸಂಜೆ 7 ಗಂಟೆಗೆ ವಿಶೇಷ ಪ್ರಾರ್ಥನೆ , ಶ್ರೀ ದೇವರಿಗೆ ಅಷ್ಟಾವಧಾನ ಹಾಗೂ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಸೇವಾರ್ಥಿ ದೇವಸ್ಥಾನದ ಪಾಕ ತಜ್ಞ ಕೃಷ್ಣಭಟ್ ಪಾವಂಜೆ ರವರನ್ನು ಗೌರವಿಸಲಾಯಿತು ದೇವಸ್ಥಾನದ ಅರ್ಚಕರಾದ ಶಶಾಂಕ್ ಮುಚ್ಚಿಂತಾಯ, ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ ರಾವ್, ಸುರೇಶ್ ರಾವ್, ನಿವೃತ್ತ ಶಿಕ್ಷಕ ರಾಮಭಟ್ ಪುನರೂರು, ಉಷಾ ಹರಿಕೃಷ್ಣ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/05/2022 09:15 pm